ಕರ್ನಾಟಕ

karnataka

ETV Bharat / bharat

ಒಮಿಕ್ರಾನ್ ಡೆಲ್ಟಾ ರೂಪಾಂತರ ಮೀರಿಸುವ ಸಾಧ್ಯತೆಯಿದೆ: ವಿಶ್ವ ಆರೋಗ್ಯ ಸಂಸ್ಥೆ - ಓಮಿಕ್ರಾನ್ ಡೆಲ್ಟಾ ರೂಪಾಂತರವನ್ನು ಮೀರಿಸುವ ಸಾಧ್ಯತೆ

ದೆಹಲಿಯಲ್ಲಿ ಒಮಿಕ್ರಾನ್‌ನ ಮೊದಲ ರೋಗಿಯಾದ 37 ವರ್ಷದ ವ್ಯಕ್ತಿಯನ್ನು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ರಾಂಚಿಯ ನಿವಾಸಿಯಾಗಿರುವ ವ್ಯಕ್ತಿ, ಡಿಸೆಂಬರ್ 2 ರಂದು ತಾಂಜಾನಿಯಾದಿಂದ ದೋಹಾಗೆ ಮತ್ತು ಅಲ್ಲಿಂದ ದೆಹಲಿಗೆ ಕತಾರ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸಿದ್ದರು. ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಒಂದು ವಾರ ತಂಗಿದ್ದರು ಮತ್ತು ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿದ್ದರು.

Omicron likely to outpace Delta variant, says World Health Organisation
Omicron likely to outpace Delta variant, says World Health Organisation

By

Published : Dec 14, 2021, 5:00 PM IST

Updated : Dec 14, 2021, 7:50 PM IST

ಹೈದರಾಬಾದ್: ದೇಶದಲ್ಲಿ ಒಮಿಕ್ರಾನ್ ಪಾಸಿಟಿವ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಇದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ರಾಜ್ಯ ಸರ್ಕಾರಗಳು ಕೋವಿಡ್ ಪ್ರೋಟೋಕಾಲ್‌ಗಳನ್ನು ಕಾಪಾಡಿಕೊಳ್ಳಲು ಜನರಿಗೆ ಮನವಿ ಮಾಡಿಕೊಳ್ಳುತ್ತಿವೆ. ಕೋವಿಡ್‌ನ ಎರಡನೇ ಅಲೆಯ ನಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಈಗ ಒಮಿಕ್ರಾನ್ ಪ್ರಕರಣಗಳ ಹೆಚ್ಚಳವು ಮತ್ತೊಮ್ಮೆ ಜನರನ್ನು ಹೈ ಅಲರ್ಟ್‌ನಲ್ಲಿ ಇರುವಂತೆ ಮಾಡಿದೆ.

ಮಂಗಳವಾರದವರೆಗೆ ಲಂಡನ್‌ನಲ್ಲಿ ಒಮಿಕ್ರಾನ್​ ಶೇಕಡಾ 50ರಷ್ಟು ಪ್ರಕರಣಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತಿರುವ ಬೆನ್ನಲ್ಲೇ ಒಮಿಕ್ರಾನ್‌ನಿಂದ ಅಲ್ಲಿ ಮೊದಲ ಸಾವಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸ್ಪಷ್ಟನೆ ಕೂಡ ನೀಡಿದ್ದಾರೆ.

ಇದರ ನಡುವೆ ಬಾಲಿವುಡ್ ನಟರಾದ ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಅವರು ಮುಂಬೈನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ವಾಸ್ತವವಾಗಿ, ಪ್ರಪಂಚದಾದ್ಯಂತ ಹಾಗೆ ಭಾರತದಾದ್ಯಂತ ಆರೋಗ್ಯ ತಜ್ಞರು ಮತ್ತು ಸರ್ಕಾರಗಳ ಹೇಳಿಕೆಗಳಿಂದಾಗಿ ಜನರು ಗೊಂದಲಕ್ಕೊಳಗಾಗಿದ್ದಾರೆ.

ಇನ್ನು ಕೋವಿಡ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದ್ದು, ತಕ್ಷಣವೇ ಇಡೀ ಜಗತ್ತು ಎಚ್ಚರಗೊಂಡಿದೆ. ಕಾರಣ ಈ ಹೊಸ ವೈರಸ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಮಾರಕವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:Council Result... ಬೆಳಗಾವಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಲಖನ್ ಗೆಲುವು

ಇದಾದ ನಂತರ ಸರ್ಕಾರಗಳು ತಡವಾಗಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸಿವೆ. ಇನ್ನು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಎರಡೂ ತಳಿಗಳಿಂದ ಬಳಲುತ್ತಿರುವ ದೇಶಗಳಲ್ಲಿ ಒಮಿಕ್ರಾನ್ ಡೆಲ್ಟಾವನ್ನು ಮೀರಿಸಬಹುದು ಎಂದು ಎಚ್ಚರಿಸಿದೆ. ಹಾಗೆ ಹೆಚ್ಚು ರೂಪಾಂತರಿತ ಮತ್ತು ಸಂಭಾವ್ಯವಾಗಿ ಹೆಚ್ಚು ಲಸಿಕೆ - ನಿರೋಧಕ ತಳಿಯು ವರ್ಷದ ಅಂತ್ಯದ ವೇಳೆಗೆ ಅನೇಕ ದೇಶಗಳಲ್ಲಿ ಪ್ರಬಲವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಮುದಾಯ ಪ್ರಸರಣ ಸಂಭವಿಸುವ ಡೆಲ್ಟಾ ರೂಪಾಂತರವನ್ನು ಒಮಿಕ್ರಾನ್​ ಮೀರಿಸುವ ಸಾಧ್ಯತೆಯಿದೆ ಎಂದು WHO ಶುಕ್ರವಾರ ಎಚ್ಚರಿಸಿದೆ ಹಾಗೆ ಡಿಸೆಂಬರ್ 9ರ ಹೊತ್ತಿಗೆ 63 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಟ್ವೀಟ್​ ಮಾಡಿದೆ.

ಒಮಿಕ್ರಾನ್​ನ ಹೆಚ್ಚಿನ ಪ್ರಸರಣ ದರವು ಕಳವಳಕ್ಕೆ ಕಾರಣವಾಗಿದ್ದರೂ ಈ ರೂಪಾಂತರವು ಮಾರಣಾಂತಿಕ ಅಥವಾ ಓವರ್‌ಲೋಡ್ ಆಗದಿರಬಹುದು ಎಂಬ ಆರಂಭಿಕ ಸೂಚನೆಗಳಿವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರ ನಡುವೆ ದೆಹಲಿಯಲ್ಲಿ ನಾಲ್ಕು ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಆರಕ್ಕೆ ಏರಿದೆ. ದೆಹಲಿಯ ಒಮಿಕ್ರಾನ್‌ನ ಮೊದಲ ರೋಗಿಯಾದ 37 ವರ್ಷದ ವ್ಯಕ್ತಿಯನ್ನು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹೋಗಿರುವ ಪ್ರಯಾಣದ ಇತಿಹಾಸ ಹೊಂದಿರುವ 35 ವರ್ಷದ ವ್ಯಕ್ತಿಯೊಬ್ಬರು ಒಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೆ.

Last Updated : Dec 14, 2021, 7:50 PM IST

ABOUT THE AUTHOR

...view details