ನವದೆಹಲಿ: ಡೆಲ್ಟಾ ರೂಪಾಂತರಿಗಿಂತ ಒಮಿಕ್ರೋನ್ ಗುಣಲಕ್ಷಣಗಳು ಲಘುವಾಗಿವೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯೆ ಹಾಗೂ ದಕ್ಷಿಣ ಆಫ್ರಿಕಾ ವೈದ್ಯಕೀಯ ಅಸೋಸಿಯೇಷನ್ ಮುಖ್ಯಸ್ಥೆ ಡಾ.ಏಂಜೆಲಿಕ್ ಕೋಟ್ಜಿ ತಿಳಿಸಿದ್ದಾರೆ.
ಆಯಾಸ, ದೇಹ ನೋಯುವುದು ಒಮಿಕ್ರೋನ್ನ ಪ್ರಮುಖ ಲಕ್ಷಣಗಳು. ಜೊತೆಗೆ ಲಘು ತಲೆನೋವು, ಸುಸ್ತಾಗುವುದು ಕೂಡ ರೂಪಾಂತರಿಯ ಲಕ್ಷಣಗಳು. ಆದ್ರೆ ವಾಸನೆ ಅಥವಾ ರುಚಿ ಕಳೆದುಕೊಳ್ಳುವುದು ಮತ್ತು ಮೂಗು ಕಟ್ಟುವುದು, ಜ್ವರದ ಲಕ್ಷಣಗಳು ಸೋಂಕಿತರಲ್ಲಿ ಕಂಡುಬಂದಿಲ್ಲ. ಇವು ಡೆಲ್ಟಾ ಹಾಗೂ ಕೊರೊನಾ ಸೋಂಕಿತರಲ್ಲಿ ಕಂಡುಬರುತ್ತಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಡೆಲ್ಟಾ ರೂಪಾಂತರಿಯಷ್ಟು ಒಮಿಕ್ರೋನ್ ಅಪಾಯಕಾರಿ ಅಲ್ಲ. ಆದ್ರೆ ಮುಂದುವರೆದ್ರೆ ಬೇರೆ ರೀತಿ ಇರುತ್ತೆ. ಹೆಚ್ಚಿನ ಸಂಖ್ಯೆಯ ಸೋಂಕಿತರು ಆಸ್ಪತ್ರೆಗೆ ಸದ್ಯ ದಾಖಲಾಗುತ್ತಿಲ್ಲ ಎಂದು ಡಾ.ಏಂಜೆಲಿಕ್ ಕೋಟ್ಜಿ ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಎಲ್ಲ ವಯಸ್ಸಿನವರು ಕೋವಿಡ್ ಲಸಿಕೆಯಿಂದ ಒಮಿಕ್ರೋನ್ನಿಂದ ಅಲ್ಪ ಮಟ್ಟಿಗೆ ರಕ್ಷಿಸಿಕೊಳ್ಳಬಹುದು. ಲಸಿಕೆ ಪಡೆದ ಸೋಂಕಿತರಲ್ಲಿ ರೂಪಾಂತರಿಯ ಲಕ್ಷಣಗಳು ಲಘುವಾಗಿವೆ ಎಂದಿದ್ದಾರೆ.