ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಶತಕ ಬಾರಿಸಿದ 'Omicron'... ಅನಗತ್ಯ ಪ್ರಯಾಣ,ಜನಸಂದಣಿ ತಡೆಯುವಂತೆ ಕೇಂದ್ರ ಸೂಚನೆ

Omicron Cases In India: ಕೊರೊನಾ ವೈರಸ್ ಹಾವಳಿ ಜೊತೆಗೆ ದೇಶದಲ್ಲಿ ಒಮಿಕ್ರಾನ್​ ಭೀತಿ ಶುರುವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ.

Omicron Cases In India
Omicron Cases In India

By

Published : Dec 17, 2021, 11:57 PM IST

ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮಧ್ಯೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್​ ರೂಪಾಂತರಿ ಇದೀಗ ದಿನದಿಂದ ದಿನಕ್ಕೆ ತನ್ನ ವೇಗ ವಿಸ್ತರಿಸಿಕೊಳ್ಳುತ್ತಿದೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆ ಅನಗತ್ಯ ಪ್ರಯಾಣ ಹಾಗೂ ಜನಸಂದಣಿ ತಡೆಯುವಂತೆ ಸೂಚನೆ ನೀಡಿದೆ.

ದೇಶದ 11 ರಾಜ್ಯಗಳಲ್ಲಿ 101 ಒಮಿಕ್ರಾನ್​ ಸೋಂಕಿತ ಪ್ರಕರಣ ದಾಖಲಾಗಿದ್ದು, ದೇಶದ 19 ಜಿಲ್ಲೆಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಅಪಾಯದಲ್ಲಿವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಕೋವಿಡ್ ಮೂರನೇ ಅಲೆ ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವಾಲಯ ಮಾಸ್ಕ್​ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅನಗತ್ಯ ಪ್ರಯಾಣ ತಡೆಯುವಂತೆ ಸೂಚನೆ ನೀಡಿದೆ. ಇದೇ ವೇಳೆ ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವುದರ ಜೊತೆಗೆ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿಯಲು ಮನವಿ ಮಾಡಿದೆ.

ಇದನ್ನೂ ಓದಿರಿ:ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ: ಬೆಳಗಾವಿಯಲ್ಲಿ ದಿಢೀರ್​ ಪ್ರತಿಭಟನೆ; ಪೊಲೀಸರ ಮೇಲೆ ಕಲ್ಲು ತೂರಾಟ

ದೆಹಲಿಯಲ್ಲಿ ನಿನ್ನೆ ಒಂದೇ ದಿನ 10 ಮಂದಿಯಲ್ಲಿ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಮೂಡಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿದ್ದು, 40 ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ರಾಜಸ್ಥಾನದಲ್ಲಿ 17, ಕರ್ನಾಟಕ, ತೆಲಂಗಾಣದಲ್ಲಿ 8 ಪ್ರಕರಣ ದಾಖಲಾಗಿವೆ. ಇದರ ಜೊತೆಗೆ ಗುಜರಾತ್​, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲೂ ಹೊ ರೂಪಾಂತರ ವರದಿಯಾಗಿವೆ.

ಕೆಲ ರಾಜ್ಯಗಳಿಗೆ ಕೇಂದ್ರದ ಸೂಚನೆ

ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ ಮಿಜೋರಾಂ, ನಾಗಾಲ್ಯಾಂಡ್​, ರಾಜಸ್ಥಾನ, ಸಿಕ್ಕಿಂ, ಅರುಣಾಚಲಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕೆಲವೊಂದು ಜಿಲ್ಲೆಗಳಲ್ಲಿ ಶೇ. 5ರಿಂದ ಶೇ. 10ರ ಪ್ರಮಾಣದಲ್ಲಿ ಕೋವಿಡ್ ಸೋಂಕು ದಾಖಲಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಲಂಡನ್​​ನಲ್ಲಿ ಈಗಾಗಲೇ 11 ಸಾವಿರಕ್ಕೂ ಅಧಿಕ ಒಮಿಕ್ರಾನ್​ ಪ್ರಕರಣ ದಾಖಲಾಗಿದ್ದು, ಬರುವ ದಿನಗಳಲ್ಲಿ ಭಾರತ ಸಹ ಇಂತಹ ತೊಂದರೆಗೊಳಗಾಗುವ ಸಾಧ್ಯತೆ ಇರುವ ಕಾರಣ ಈಗಿನಿಂದಲೇ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಪ್ರಮುಖವಾಗಿ ದಕ್ಷಿಣ ಆಫ್ರಿಕಾ, ನಾರ್ವೇ, ಕೆನಡಾ, ಯುಕೆಯಲ್ಲಿ ಪ್ರತಿದಿನ ಹೆಚ್ಚಿನ ಒಮಿಕ್ರಾನ್​ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ, ಅಲ್ಲಿಂದ ಬರುತ್ತಿರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

ಒಮಿಕ್ರಾನ್​​​​ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಆರ್​ಟಿ-ಪಿಸಿಆರ್​ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ವರದಿ ಕೈ ಸೇರುವವರೆಗೂ ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿ ಇಲ್ಲ ಎಂದು ತಿಳಿಸಿದೆ.

ABOUT THE AUTHOR

...view details