ನವದೆಹಲಿ:ವಿಶ್ವವನ್ನೇ ಆವರಿಸಿಕೊಂಡಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ತಳಿ ಬಗ್ಗೆ ಜನರು ಅಷ್ಟಾಗಿ ತಲೆಕೆಡಿಕೊಂಡಿಲ್ಲ. ಕೊರೊನಾದ ಎಲ್ಲ ಹೊಸ ತಳಿಗಳಂತೆ ಇದು ಕೂಡ ಒಂದು ಎಂದು ಭಾವಿಸಲಾಗಿದೆ. ಆದರೆ, ಒಮಿಕ್ರಾನ್ ವೈರಸ್ ನಾವು ಅಂದುಕೊಂಡಷ್ಟು ಸೌಮ್ಯವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಸಾವು, ಸೋಂಕಿನ ವ್ಯಾಪಕತೆ ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ ನೀಡಿದೆ.
ಒಮಿಕ್ರಾನ್ ಹರಡುವಿಕೆಯ ಸರಾಸರಿ ಕಡಿಮೆ ಇದೆ. ಇದು ಸೌಮ್ಯ ಲಕ್ಷಣವುಳ್ಳ ಸೋಂಕಾಗಿದೆ ಎಂಬುದು ತಪ್ಪು ಗ್ರಹಿಕೆಯಾಗಿದೆ. ಈ ವೈರಸ್ ಬಗೆಗಿನ ತಾತ್ಸಾರ ಹೀಗೇಯೇ ಮುಂದುವರಿದಲ್ಲಿ ಆಸ್ಪತ್ರೆಗೆ ದಾಖಲು ಪ್ರಮಾಣ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಳ್ಳಲಿದೆ ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.