ಕರ್ನಾಟಕ

karnataka

ETV Bharat / bharat

ಕೊರೊನಾ ಯಾವಾಗ ಕೊನೆಗೊಳ್ಳುತ್ತದೆ?: ವೈರಾಲಜಿಸ್ಟ್​ ನೀಡಿದ್ರು ಸಿಹಿ ಸುದ್ದಿ - ದೇಶದಲ್ಲಿ ಮತ್ತೊಂದು ಕೊರೊನಾ ಲಾಕ್‌ಡೌನ್ ಬೇಕೇ

ಸಾಮಾನ್ಯವಾಗಿ ಸೌಮ್ಯವಾದ ರೋಗಲಕ್ಷಣಗಳಿರುವ ವ್ಯಕ್ತಿಗಳು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಲ್ಲ. ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ವೈರಾಲಜಿಸ್ಟ್​ ಅಭಿಪ್ರಾಯಪಟ್ಟಿದ್ದಾರೆ.

Omicron cases could reach its peak in India early next year, says virologist Jacob John
ಕೊರೊನಾ ಯಾವಾಗ ಕೊನೆಗೊಳ್ಳುತ್ತದೆ?: ವೈರಾಲಜಿಸ್ಟ್​ನಿಂದ ಸಿಹಿ ಸುದ್ದಿ

By

Published : Dec 15, 2021, 10:56 AM IST

ಹೈದರಾಬಾದ್:ಕೋವಿಡ್ ಸೋಂಕಿನ ಎರಡನೇ ಅಲೆಯು ಭಾರತೀಯರ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ. ಎರಡನೇ ಅಲೆಯ ಅವಧಿಯಲ್ಲಿ ಔಷಧಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ಹಾಸಿಗೆಗಳ ಕೊರತೆಯಿಂದಾಗಿ ನೂರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಪ್ರಸ್ತುತ ಕೊರೊನಾ ವೈರಸ್​ನ ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ವೇಗವಾಗಿ ಹರಡುತ್ತಿದೆ.

ಒಮಿಕ್ರಾನ್ ಕುರಿತು ಆತಂಕಪಡುತ್ತಿರುವ ಈ ಸಮಯದಲ್ಲಿ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವೈರಾಲಜಿಸ್ಟ್ ಜಾಕೋಬ್ ಜಾನ್ ಒಮಿಕ್ರಾನ್ ಕುರಿತ ಮತ್ತಷ್ಟು ಗೊಂದಲಗಳನ್ನು ಪರಿಹರಿಸಿದ್ದಾರೆ. ಆ ಗೊಂದಲಗಳೇನು? ಆ ಗೊಂದಲಗಳಿಗೆ ಉತ್ತರವೇನು ಎಂಬುದನ್ನು ಇಲ್ಲಿ ಪ್ರಶ್ನೋತ್ತರಗಳ ಮೂಲಕ ನೀಡಲಾಗಿದೆ.

  • ಒಮಿಕ್ರಾನ್ ಹರಡದಂತೆ ತಡೆಯಲು ದೇಶ ಸಿದ್ಧವಾಗಿದೆಯೇ?

ಹೌದು, 2020 ಮತ್ತು 2021ರ ಅವಧಿಯಲ್ಲಿ ಸಾಂಕ್ರಾಮಿಕ ರೋಗದ ಎರಡು ಅಲೆಗಳನ್ನು ದೇಶ ಎದುರಿಸಿದ ನಂತರ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ತಮಗೆ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಸಾಕಷ್ಟು ಜ್ಞಾನ ಪಡೆದಿವೆ. ಮೂರನೇ ಅಲೆ ಎದುರಿಸಲು ಎಲ್ಲಾ ರಾಜ್ಯಗಳು ಸನ್ನದ್ಧವಾಗಿವೆ.

  • ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಯಾವಾಗ ಹೆಚ್ಚಾಗುತ್ತವೆ?

ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಒಮಿಕ್ರಾನ್ ವೈರಸ್ ಭಾರತದಲ್ಲಿ ಕಾಣಿಸಿಕೊಂಡಿದೆ. ಇದು ಅತ್ಯಂತ ವೇಗವಾಗಿ ಹರಡುವ ವೈರಸ್ ಆಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಅಂದ್ರೆ 2022ರ ಜನವರಿ ತಿಂಗಳಲ್ಲಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.

  • ಕೊರೊನಾ ಎದುರಿಸಲು ದೇಶದ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯಕೀಯ ಉಪಕರಣಗಳ ಲಭ್ಯತೆ ಇದೆಯೇ?

ಮೊದಲ ಮತ್ತು ಎರಡನೇ ಕೋವಿಡ್ ಅಲೆಯಲ್ಲಿ ಕ್ವಾರಂಟೈನ್ ಅವಧಿ 7 ದಿನಗಳಿತ್ತು. ಆದರೆ ಈಗ ಒಮಿಕ್ರಾನ್​ ಅವಧಿಯಲ್ಲಿ ಕ್ವಾರಂಟೈನ್ ಅವಧಿಯು 14 ದಿನಗಳಿಗೆ ಏರಿಕೆಯಾಗಿದೆ. ಅಂದರೆ ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಸೌಮ್ಯವಾದ ರೋಗಲಕ್ಷಣಗಳಿರುವ ವ್ಯಕ್ತಿಗಳು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಲ್ಲ. 2022ರ ಮೊದಲ ಮೂರು ತಿಂಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಒಮಿಕ್ರಾನ್ ಹರಡುವ ವೇಗ ಹೆಚ್ಚಿರುವ ಕಾರಣದಿಂದ 7 ದಿನಗಳ ನಂತರ ಟೆಸ್ಟ್ ಮಾಡಿ, ವರದಿ ನೆಗೆಟಿವ್ ಬಂದರೆ ಮರುಪರೀಕ್ಷೆಯ ಅಗತ್ಯವಿಲ್ಲ. 14 ದಿನಗಳ ಕ್ವಾರಂಟೈನ್ ಅಥವಾ ಮರುಪರೀಕ್ಷೆ ಅಗತ್ಯವಿರುವುದಿಲ್ಲ.

  • ದೇಶದಲ್ಲಿ ಮತ್ತೊಂದು ಲಾಕ್‌ಡೌನ್ ಬೇಕೇ?

ಕೋವಿಡ್ ಮೂರನೇ ಅಲೆ ಸಂಭವಿಸುವ ಸಾಧ್ಯತೆಯಿಲ್ಲ. ಕೋವಿಡ್ ಪ್ರಕರಣಗಳಲ್ಲಿ ಸಣ್ಣ ಪ್ರಮಾಣದ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಿದೆ. ಜನರಲ್ಲಿ ರೋಗನಿರೋಧಕ ಶಕ್ತಿ ತುಂಬಾ ಹೆಚ್ಚಿರುವಾಗ ಒಮಿಕ್ರಾನ್ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಒಮಿಕ್ರಾನ್ ಉಲ್ಬಣಗೊಳ್ಳಬಹುದು. ಅವರ ಕಾಳಜಿ ಅಗತ್ಯ. ಭಾರತದಲ್ಲಿ ಎಲ್ಲಿಯೂ ಲಾಕ್‌ಡೌನ್ ಅಗತ್ಯವಿಲ್ಲ.

  • ಲಸಿಕೆ ಹಾಕಿಸಿಕೊಳ್ಳದವರಿಗೆ ಒಮಿಕ್ರಾನ್​ನಿಂದ ಅಪಾಯವಿದೆಯೇ?

ಲಸಿಕೆ ಹಾಕಿಸಿಕೊಳ್ಳದವರಿಗೆ ಅಪಾಯ ಇರುತ್ತದೆಯೇ? ಇರುವುದಿಲ್ಲವೇ? ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವೃದ್ಧರು, ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ರೋಗ ತೀವ್ರವಾಗಬಹುದು. ರೋಗದಿಂದ ದುಷ್ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಲಸಿಕೆ ಸಹಕರಿಸುತ್ತದೆ. ಆದ್ದರಿಂದ ಲಸಿಕೆ ಹಾಕಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

  • ಕೊರೊನಾ ಮಹಾಮಾರಿ ಯಾವಾಗ ಕೊನೆಗೊಳ್ಳುತ್ತದೆ?

ಕೊರೊನಾ ಡಿಸೆಂಬರ್ 2019 ಮತ್ತು ಏಪ್ರಿಲ್ 2020ರ ನಡುವೆ ವಿವಿಧ ದೇಶಗಳಲ್ಲಿ ಕಾಣಿಸಿಕೊಂಡಿತು. ಕೆಲವೊಮ್ಮೆ ಆಕಸ್ಮಿಕವಾಗಿ ಸಾಂಕ್ರಾಮಿಕ ರೋಗಗಳು ಕೊನೆಗೊಳ್ಳುತ್ತವೆ. ಈಗಾಗಲೇ ಭಾರತ, ತೈವಾನ್ ಮತ್ತು ಜಪಾನ್ ಕೊರೊನಾ ಸಾಂಕ್ರಾಮಿಕ ಕೊನೆಯ ಹಂತವನ್ನು ತಲುಪಿದೆ. 2022ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಕೊರೊನಾ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇನೆ. ಒಮ್ಮೊಮ್ಮೆ ಜ್ವರ, ನೆಗಡಿ ತಲೆನೋವಿನಂತೆ ಕೊರೊನಾ ಕೂಡಾ ಮುಂದುವರೆಯುವ ಸಾಧ್ಯತೆ ಇದೆ ಎಂದು ವೈರಾಲಾಜಿಸ್ಟ್​ ಜಾಕೋಬ್​ ಜಾನ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಪುನಾರಂಭ ಬೇಡ : ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಿಂದ ವರದಿ

ABOUT THE AUTHOR

...view details