ಹೈದರಾಬಾದ್(ತೆಲಂಗಾಣ):ಕೋವಿಡ್ ಮಹಾಮಾರಿ ಹಾವಳಿ ದೇಶದಲ್ಲಿ ತಗ್ಗಿದ್ದು, ಇದರ ಮಧ್ಯೆ ಕೊರೊನಾ ವೈರಸ್ನ ಮತ್ತೊಂದು ಹೊಸ ರೂಪಾಂತರಿ ಭಾರತಕ್ಕೆ ಲಗ್ಗೆ ಹಾಕಿದೆ. ಓಮಿಕ್ರಾನ್ ಉಪ ತಳಿ BA.4 ಮೊದಲ ಪ್ರಕರಣ ಹೈದರಾಬಾದ್ನಲ್ಲಿ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕೋವಿಡ್ ಪ್ರಕರಣ ಈಗಾಗಲೇ ಕಂಡು ಬಂದಿದ್ದು, ಇದೀಗ ಭಾರತಕ್ಕೂ ಲಗ್ಗೆ ಹಾಕಿದೆ.
ರೂಪಾಂತರದ ಮೊದಲ ಪ್ರಕರಣ ಮೇ. 9ರಂದು ಹೈದರಾಬಾದ್ನಲ್ಲಿ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ SARS Cov - 2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಗುರುವಾರ ಬಹಿರಂಗಪಡಿಸಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವೈದ್ಯರಿಗೆ ಓಮಿಕ್ರಾನ್ BA.4 ಸೋಂಕು ಇರುವುದು ಪತ್ತೆಯಾಗಿದೆ.