ಕರ್ನಾಟಕ

karnataka

ETV Bharat / bharat

Omicron: ಮುಂಬೈಗೆ ಬರುವ ವಿದೇಶಿ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್‌ ಕಡ್ಡಾಯ - ಮುಂಬೈಗೆ ಬರುವ ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್‌

ದೇಶದಲ್ಲಿ ಮೂರು ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಮುಂಬೈಗೆ ಬರುವ ವಿದೇಶಿ ಪ್ರಯಾಣಿಕರಿಗೆ 7 ದಿನ ಹೋಮ್‌ ಕ್ವಾರಂಟೈನ್‌ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

Omicron: 7 days compulsory quarantine for foreign travelers in Mumbai
Omicron: ಮುಂಬೈಗೆ ಬರುವ ವಿದೇಶಿ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್‌ ಕಡ್ಡಾಯ

By

Published : Dec 4, 2021, 4:13 PM IST

ಮುಂಬೈ:ಜಗತ್ತಿನಾದ್ಯಂತ ಕೊರೊನಾ ವೈರಸ್‌ ಹೊಸ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮುಂಬೈ ಮಹಾನಗರ ಪಾಲಿಕೆ ಒಮಿಕ್ರಾನ್‌ ತಡೆಗೆ ಹಲವು ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ವಾಣಿಜ್ಯ ನಗರಿಗೆ ಬರುವ ವಿದೇಶಿ ಪ್ರಯಾಣಿಕರು 7 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಹೋಮ್​ ಕ್ವಾರಂಟೈನ್‌ನಲ್ಲಿರುವ ವಲಸಿಗರ ಆರೋಗ್ಯವನ್ನು ಪಾಲಿಕೆಯ ವಾರ್ಡ್ ವಾರ್ ರೂಂ ಹಾಗೂ ವೈದ್ಯಕೀಯ ತಂಡ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದು ಬೃಹನ್​ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಮುಂಬೈಗೆ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಪರಿಶೀಲಿಸಲಾಗುತ್ತಿದೆ.

ಒಮಿಕ್ರಾನ್‌ ತಡೆಗೆ ಹಲವು ನಿರ್ಬಂಧಗಳನ್ನು ಜಾರಿಗೆ ತಂದ ಮುಂಬೈ ಪಾಲಿಕೆ

ನವೆಂಬರ್ 10 ರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪತ್ತೆಹಚ್ಚಲು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೋವಿಡ್‌ ಪಾಸಿಟಿವ್ ಎಂದು ಕಂಡು ಬಂದ ರೋಗಿಗಳ ಮೇಲೆ ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಎಸ್ ಜೀನ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ, ಮುಂಬೈಗೆ ಬರುವ ಒಮಿಕ್ರಾನ್‌ ಅಥವಾ ಕೊರೊನಾ ಪಾಸಿಟಿವ್ ರೋಗಿಗಳನ್ನು ತಡೆಗಟ್ಟಲು ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ:ಇನ್ನೂ ಕೋವಿಡ್​ ಲಸಿಕೆ ಪಡೆಯದ 1,707 ಬೋಧಕ-ಬೋಧಕೇತರ ಸಿಬ್ಬಂದಿ: ಕೇರಳ ಸರ್ಕಾರದಿಂದ ಕಠಿಣ ಕ್ರಮ

ABOUT THE AUTHOR

...view details