ಕರ್ನಾಟಕ

karnataka

ETV Bharat / bharat

ಮಹೀಂದ್ರಾ ಥಾರ್​ ಮುಂದೇ ಏನೂ ಇಲ್ಲ ಎಂದ ಒಮರ್​ ಅಬ್ದುಲ್ಲಾ.. ಆನಂದ ಮಹೀಂದ್ರಾ ಹೇಳಿದ್ದೇನು? - ಗುಲ್ಮಾರ್ಗ್​ನಲ್ಲಿ ಮಹೀಂದ್ರ ಥಾರ್​

ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು NC ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ನೆಚ್ಚಿನ ರೈಡ್‌ಗಳಲ್ಲಿ ಮಹೀಂದ್ರ ಥಾರ್ ಖಂಡಿತವಾಗಿಯೂ ಒಂದಾಗಿದೆ ಎಂದು ಹೇಳಿದ್ದಾರೆ. ವಿಪರೀತ ಹವಾಮಾನ ಮತ್ತು ಹಿಮಭರಿತ ಪರಿಸ್ಥಿತಿಗಳಲ್ಲಿ ಕಾರಿನ ಪರ್ಫಾಮೆನ್ಸ್​​​​ ಬಗ್ಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

former Chief Minister Omar Abdullah tweet  omar abdullah tweet on Mahindra thar  Anand mahindra retweet to omar abdullah  Mahindra thar in Gulmarg  Gulmarg snow  ಮಾಜಿ ಸಿಎಂ ಒಮರ್​ ಅಬ್ದುಲ್ಲಾ ಟ್ವೀಟ್​ ಮಹೀಂದ್ರ ಕಾರ್​ ಬಗ್ಗೆ ಒಮರ್​ ಅಬ್ದುಲ್ಲಾ ಟ್ವೀಟ್​ ಒಮರ್​ ಅಬ್ದುಲ್​ಗೆ ಆನಂದ ಮಹೀಂದ್ರ ರೀಟ್ವೀಟ್​ ಗುಲ್ಮಾರ್ಗ್​ನಲ್ಲಿ ಮಹೀಂದ್ರ ಥಾರ್​ ಗುಲ್ಮಾರ್ಗ್​ ಹಿಮ
ಗುಲ್ಮಾರ್ಗ್​ನಲ್ಲಿ ಮಹೀಂದ್ರ ಥಾರ್​ ಮುಂದೇ ಏನೂ ಇಲ್ಲ ಎಂದ ಒಮರ್​ ಅಬ್ದುಲ್ಲಾ

By

Published : Jan 6, 2022, 2:25 PM IST

ಗುಲ್ಮಾರ್ಗ್​:ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಹಿಮದಿಂದ ಆವೃತವಾದ ಕಾಶ್ಮೀರದ ಗುಲ್ಮಾರ್ಗ್ ಕಣಿವೆಯಲ್ಲಿ ಮಹೀಂದ್ರ ಥಾರ್ ಎಸ್‌ಯುವಿ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮಹೀಂದ್ರಾ ಥಾರ್ ಎಸ್‌ಯುವಿಯ ಪರಾಕ್ರಮ ಶ್ಲಾಘಿಸಿದ ಒಮರ್ ಅಬ್ದುಲ್ಲಾ, ‘ಹಿಮದಲ್ಲಿ #ಗುಲ್ಮಾರ್ಗ್‌ ಕಣಿವೆ ಏರಲು ಹೊಸ ಮಹೀಂದ್ರಾ ರೈಸ್​ ಥಾರ್‌ ಮುಂದೆ ಏನೂ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಒಮರ್ ಅಬ್ದುಲ್ಲಾ ಗುಲ್ಮಾರ್ಗ್ ಕಣಿವೆಗಳ ಹಿಮವನ್ನು ಆನಂದಿಸುತ್ತಿದ್ದಾರೆ. ಒಮರ್ ಅಬ್ದುಲ್ಲಾರಿಗೆ ರೀಟ್ವೀಟ್ ಮಾಡಿದ ಆನಂದ್ ಮಹೀಂದ್ರಾ, ‘ಯಾವತ್ತೂ ನಿಜವಾದ ಪದವನ್ನು ಮಾತನಾಡಿಲ್ಲ!’ ಎಂದು ತಮಾಷೆ ಮಾಡಿದ್ದಾರೆ.

ಉತ್ತರ ಕಾಶ್ಮೀರದ ಪ್ರಸಿದ್ಧ ಸ್ಕೀಯಿಂಗ್ ರೆಸಾರ್ಟ್ ಗುಲ್ಮಾರ್ಗ್, ಹಿಂದಿನ ರಾತ್ರಿ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮೈನಸ್ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ.

ಇತ್ತೀಚಿನ ಮಹೀಂದ್ರಾ ಥಾರ್ ಅನ್ನು 2020 ರ ಅಕ್ಟೋಬರ್ 2 ರಂದು ಬಿಡುಗಡೆ ಮಾಡಲಾಯಿತು. ಬಿಡುಗಡೆಯ ಸಮಯದಲ್ಲಿ, ಥಾರ್ ಎಎಕ್ಸ್ ರೂಪಾಂತರದ ಬೆಲೆ ₹9.8 ಲಕ್ಷ ಮತ್ತು ಐಷಾರಾಮಿ - ಆಧಾರಿತ ಥಾರ್ ಎಲ್‌ಎಕ್ಸ್ ಬೆಲೆ ₹12.49 ಲಕ್ಷದಿಂದ ಪ್ರಾರಂಭಿಸಲಾಗಿತ್ತು.

ABOUT THE AUTHOR

...view details