ನವದೆಹಲಿ:ನಾಗರಿಕ ಸೇವಾ ಆಯೋಗದ ಪರೀಕ್ಷೆಗೆ ಹಾಜರಾಗದೇ ಉತ್ತೀರ್ಣರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದು, ಅದಕ್ಕೆ ಖುದ್ದಾಗಿ ಅಂಜಲಿ ಬಿರ್ಲಾ ತಿರುಗೇಟು ನೀಡಿದ್ದಾರೆ.
ಲೋಕಸಭಾ ಸ್ಪೀಕರ್ ಪುತ್ರಿ ಅಂಜಲಿ ತಿರುಗೇಟು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದನ್ನ ತಡೆಯಲು ಒಂದು ಕಾನೂನು ಜಾರಿಗೊಳಿಸಬೇಕು ಎಂದಿರುವ ಅವರು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಅನೇಕರು ಸಂತ್ರಸ್ತರಾಗಬಹುದು ಎಂದು ತಿಳಿಸಿದ್ದಾರೆ.
ಓದಿ: ದೇಶಾದ್ಯಂತ 6 ದಿನದಲ್ಲಿ 9.99 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ
23 ವರ್ಷದ ಅಂಜಲಿ ಬಿರ್ಲಾ ಇದೇ ವರ್ಷ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದರು. ತಂದೆ ಓಂ ಬಿರ್ಲಾ ಪ್ರಭಾವ ಬಳಸಿಕೊಂಡು ಯಾವುದೇ ಪರೀಕ್ಷೆಗೆ ಹಾಜರಾಗದೇ ಅವರು ಪಾಸ್ ಆಗಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡಿದ್ದವು.
ನಾನು ಪ್ರತಿದಿನ 8 ಗಂಟೆಗಳ ಕಾಲ ಓದಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ.ಆಧಾರರಹಿತ ಟೀಕೆಗಳಿಂದ ನನಗೆ ನೋವಾಗಿದೆ. ಆದರೆ ಇಂತಹ ಆರೋಪಗಳು ನನ್ನನ್ನು ಇನ್ನಷ್ಟು ಗಟ್ಟಿ ಮಾಡಿವೆ. ನಾನು ಯಾವಾಗಲೂ ಪ್ರಾಮಾಣಿಕಳಾಗಿದ್ದೇನೆ ಎಂದಿದ್ದಾರೆ.