ಕರ್ನಾಟಕ

karnataka

ETV Bharat / bharat

ಮಹಿಳೆಯರಿಗೆ ನಾವು ಸಮಾನ ವೇದಿಕೆ ಕಲ್ಪಿಸುತ್ತಿದ್ದೇವೆ: ಕ್ರೀಡಾ ಸಚಿವ ಕಿರಣ್​ ರಿಜಿಜು - walkathon on International Women's Day

ಮಹಿಳೆಯರು ಸಮಾಜದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ನೀಡಲು ನಾವು ಬಯಸುತ್ತೇವೆ. ಮಹಿಳಾ ಸಬಲೀಕರಣವೇ ನಮ್ಮ ಆದ್ಯತೆಯಾಗಿದೆ ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ಹೇಳಿದ್ದಾರೆ.

Rijiju
ಕ್ರೀಡಾ ಸಚಿವ ಕಿರಣ್​ ರಿಜಿಜು

By

Published : Mar 8, 2021, 11:52 AM IST

ನವದೆಹಲಿ:ಒಲಿಂಪಿಕ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನೋಡಿದರೆ ಭಾರತೀಯ ಮಹಿಳೆಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾವು ಅವರಿಗೆ ಸಮಾನ ವೇದಿಕೆ, ಅವಕಾಶ ಕಲ್ಪಿಸುತ್ತಿದ್ದೇವೆ ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭ ಕೋರಿದ ಕಿರಣ್​ ರಿಜಿಜು, ಇಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವಾಕ್‌ಥಾನ್ ಆಯೋಜಿಸಿರುವುದಾಗಿ ತಿಳಿಸಿದರು. ನಡಿಗೆ ಸ್ಪರ್ಧೆಯಲ್ಲಿ ನಮ್ಮೆಲ್ಲ ಸಹೋದರಿಯರು, ಸ್ವಯಂಸೇವಕಿಯರು ಭಾಗವಹಿಸುತ್ತಿದ್ದು, ಮಹಿಳೆಯರು ಸಮಾಜದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ಮಹಿಳಾ ಸಬಲೀಕರಣವೇ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ: ಮಹಿಳೆಯರಿಗೆ ರಾಹುಲ್ ಕಿವಿಮಾತು

ಇದೇ ವೇಳೆ, 2021ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ನಿಗದಿತ ವೇಳಾಪಟ್ಟಿಯ ಪ್ರಕಾರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಕುರಿತ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ರಿಜಿಜು ತಿಳಿಸಿದ್ದಾರೆ.

ABOUT THE AUTHOR

...view details