ಕರ್ನಾಟಕ

karnataka

ETV Bharat / bharat

ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಒಲಿಂಪಿಯನ್ ವರೀಂದರ್ ಸಿಂಗ್ ನಿಧನ

ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಒಲಿಂಪಿಯನ್ ವರಿಂದರ್ ಸಿಂಗ್ ವಿಧಿವಶರಾಗಿದ್ದಾರೆ.

Varinder Singh
ವರೀಂದರ್ ಸಿಂಗ್

By

Published : Jun 28, 2022, 12:28 PM IST

ಜಲಂಧರ್(ಪಂಜಾಬ್​):ಒಲಿಂಪಿಕ್ ಹಾಕಿ ಆಟಗಾರ ವರೀಂದರ್ ಸಿಂಗ್ ಇಂದು ಪಂಜಾಬ್‌ನ ಜಲಂಧರ್‌ನಲ್ಲಿ ನಿಧನರಾದರು. ಮೇ 16, 1947 ರಂದು ಜನಿಸಿದ ಇವರು ಒಲಿಂಪಿಯನ್ ಭಾರತೀಯ ಹಾಕಿ ಆಟಗಾರರಾಗಿದ್ದರು. 1972ರಲ್ಲಿ ಮ್ಯೂನಿಚ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಲ್ಲದೇ ಅವರು 1976ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.

ಹಾಕಿ ದಿಗ್ಗಜನ ನಿಧನಕ್ಕೆ ಸುರ್ಜಿತ್ ಹಾಕಿ ಸೊಸೈಟಿ ಸಂತಾಪ ವ್ಯಕ್ತಪಡಿಸಿದೆ. 'ನಾವೆಲ್ಲರೂ ಸುರ್ಜಿತ್ ಹಾಕಿ ಸೊಸೈಟಿಯ ಸದಸ್ಯರು. ಅವರ ಸಾವು ಕುಟುಂಬ ಸದಸ್ಯರಿಗೆ ಭರಿಸಲಾಗದ ನಷ್ಟ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಮತ್ತು ಅವರ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ನೀಡುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ' ಎಂದು ಸಂತಾಪ ಸೂಚಿಸಿದೆ.

ಒಲಿಂಪಿಕ್ ಹಾಕಿ ಆಟಗಾರ ವರೀಂದರ್ ಸಿಂಗ್ ನಿಧನ

ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಒಲಿಂಪಿಯನ್ ವರೀಂದರ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:30ಕ್ಕೆ ಜಲಂಧರ್‌ನ ಜಿಟಿ ರಸ್ತೆಯಲ್ಲಿರುವ ಅವರ ಹುಟ್ಟೂರು ಧನ್ನೋವಾಲಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿಂಬಲ್ಡನ್​ ಪಂದ್ಯದಲ್ಲಿ ಕ್ವಾನ್​ ಸೂನ್​-ವೂ ವಿರುದ್ಧ ಜೊಕೊವಿಕ್​ಗೆ​ ಜಯ

ABOUT THE AUTHOR

...view details