ಕರ್ನಾಟಕ

karnataka

ETV Bharat / bharat

ಕೋವಿಡ್​ ಸೋಂಕಿತ ವಯೋವೃದ್ಧರಿಗೆ ಮರೆವಿನ ಕಾಯಿಲೆ ಸಾಧ್ಯತೆ: ಅಧ್ಯಯನ

ಜರ್ನಲ್ ಆಫ್ ಅಲ್ಜೈಮರ್ಸ್ ಡಿಸೀಸ್‌ನಲ್ಲಿ(ಮರೆವಿನ ಕಾಯಿಲೆ) ಪ್ರಕಟವಾದ ಅಧ್ಯಯನದಲ್ಲಿ, ಕೋವಿಡ್-19 ಸೋಂಕಿಗೆ ಒಳಗಾದ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ತಮಗೆ ಕೋವಿಡ್​ ರೋಗ ಪತ್ತೆಯಾದ ನಂತರದ ವರ್ಷದಲ್ಲಿ ಅಲ್ಜೈಮರ್ಸ್​ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಕೋವಿಡ್​ ಸೋಂಕಿತ ವಯೋವೃದ್ಧರಿಗೆ ಅಲ್ಜೈಮರ್
Older adults infected with COVID-19

By

Published : Sep 14, 2022, 12:51 PM IST

ಹೊಸದಿಲ್ಲಿ: ಒಂದು ಅಧ್ಯಯನದ ಪ್ರಕಾರ ಕೋವಿಡ್-19 ಸೋಂಕಿಗೆ ಒಳಗಾದ ವಯಸ್ಸಾದ ವ್ಯಕ್ತಿಗಳು ಒಂದು ವರ್ಷದೊಳಗೆ ಅಲ್ಜೈಮರ್ಸ್​ ಕಾಯಿಲೆ(ಮರೆವಿನ ಕಾಯಿಲೆ)ಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು ಈ ಸಾಧ್ಯತೆ ಇತರರಿಗಿಂತ ಶೇ 50 ರಿಂದ 80 ರವರೆಗೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.

ಜರ್ನಲ್ ಆಫ್ ಅಲ್ಜೈಮರ್ಸ್ ಡಿಸೀಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಕೋವಿಡ್-19 ಸೋಂಕಿಗೆ ಒಳಗಾದ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ತಮಗೆ ಕೋವಿಡ್​ ರೋಗ ಪತ್ತೆಯಾದ ನಂತರದ ವರ್ಷದಲ್ಲಿ ಅಲ್ಜೈಮರ್ಸ್​ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ವರದಿ ಮಾಡಿದ್ದಾರೆ. ಕನಿಷ್ಠ 85 ವರ್ಷ ವಯಸ್ಸಿನ ಮಹಿಳೆಯರಲ್ಲಿ ಇಂಥ ಹೆಚ್ಚಿನ ಅಪಾಯವನ್ನು ಗಮನಿಸಲಾಗಿದೆ.

ಕೋವಿಡ್ ಸೋಂಕಿನ ನಂತರದ ಒಂದು ವರ್ಷದ ಅವಧಿಯಲ್ಲಿ ವಯಸ್ಸಾದವರಲ್ಲಿ ಅಲ್ಜೈಮರ್ಸ್ ಕಾಯಿಲೆ ಕಾಡುವ ಅಪಾಯವು ಸುಮಾರು ದ್ವಿಗುಣಗೊಂಡಿದೆ (ಶೇ 0.35 ರಿಂದ 0.68) ಎಂದು ಸಂಶೋಧನೆಗಳು ತೋರಿಸಿವೆ. ಆದರೆ ಕೋವಿಡ್-19 ಇದು ಅಲ್ಜೈಮರ್ಸ್ ಕಾಯಿಲೆಯನ್ನು ತರುತ್ತದಾ ಅಥವಾ ಈಗಾಗಲೇ ಇರುವ ರೋಗವನ್ನು ಹೆಚ್ಚು ಮಾಡುತ್ತದಾ ಎಂಬುದು ಅಸ್ಪಷ್ಟವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನೂ ಓದಿ: ಕೋವಿಡ್​ ಟೆಸ್ಟ್​ಗೆ ಸ್ವ್ಯಾಬ್ ತೆಗೆದುಕೊಳ್ಳುವ ರೋಬೋಟ್ ಆವಿಷ್ಕಾರ

For All Latest Updates

ABOUT THE AUTHOR

...view details