ಕರ್ನಾಟಕ

karnataka

ETV Bharat / bharat

ವಾಹನಗಳಿಗೆ ಇಂಧನ ತುಂಬಿಸುವುದು ಯಾವುದೇ ಪರೀಕ್ಷೆಗೆ ಕಡಿಮೆ ಇಲ್ಲ: ಮೋದಿಗೆ ರಾಹುಲ್​ ಟಾಂಗ್​! - ಪ್ರಧಾನಿ ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ

ದೇಶದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದ್ದು, ಇದರ ಬೆನ್ನಲ್ಲೇ ಮೋದಿಗೆ ರಾಹುಲ್​ ಗಾಂಧಿ ಟಾಂಗ್​ ನೀಡಿದ್ದಾರೆ.

Rahul Gandhi
Rahul Gandhi

By

Published : Apr 8, 2021, 3:54 PM IST

ನವದೆಹಲಿ:ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಇದೀಗ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟಾಂಗ್​ ನೀಡಿದ್ದು, ತೈಲ ಬೆಲೆ ವಿಚಾರವಾಗಿ ಅವರ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.

ವಾಹನಗಳಿಗೆ ಇಂಧನ ತುಂಬಿಸುವುದು ಸಹ ಯಾವುದೇ ಪರೀಕ್ಷೆಗಿಂತಲೂ ಕಡಿಮೆ ಇಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಪಡೆದುಕೊಳ್ಳುತ್ತಿದೆ. ಇಂತಹ ವಿಷಯಗಳ ಬಗ್ಗೆ ಪ್ರಧಾನಿ ಏಕೆ ಚರ್ಚೆ ನಡೆಸುವುದಿಲ್ಲ ಎಂದು ಕೇಳಿದ್ದಾರೆ. ಜನಸಾಮಾನ್ಯರು ಖರ್ಚು ಮಾಡುವ ಎಲ್ಲ ವಿಷಯಗಳ ಮೇಲೂ ಚರ್ಚೆಗಳು ನಡೆಯಬೇಕು ಎಂದು ರಾಹುಲ್​ ಗಾಂಧಿ ಹಿಂದಿಯಲ್ಲಿ ಟ್ವೀಟ್​​ ಮಾಡಿದ್ದಾರೆ.

ಇದನ್ನೂ ಓದಿ: ಲಸಿಕೆ ತಯಾರಿಕೆ ವಿಳಂಬ: ಸೆರಮ್​ ಇನ್ಸಿಟ್ಯೂಟ್​ ಆಫ್​​ ಇಂಡಿಯಾಕ್ಕೆ ಆಸ್ಟ್ರಾಜೆನಿಕಾ ನೋಟಿಸ್​

ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​​ ಬೆಲೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಈಗಾಗಲೇ ಈ ವಿಷಯವನ್ನಿಟ್ಟುಕೊಂಡು ರಾಹುಲ್​ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details