ಕರ್ನಾಟಕ

karnataka

ETV Bharat / bharat

ವಾಹನ ಸವಾರರಿಗೆ ಸಿಹಿ ಸುದ್ದಿ: 35 ದಿನಗಳ ಬಳಿಕ ಇಳಿಕೆ ಕಂಡ Petrol, Diesel ದರ - ನೂರರ ಗಡಿ ದಾಟಿರುವ ಪೆಟ್ರೋಲ್ ದರ

ತಿಂಗಳಿನಿಂದ ಸ್ಥಿರತೆ ಕಾಯ್ದುಕೊಂಡಿದ್ದ ತೈಲ ಬೆಲೆಯಲ್ಲಿ ತುಸು ಇಳಿಕೆ ಕಂಡಿದೆ. ಈಗಾಗಲೇ ನೂರರ ಗಡಿ ದಾಟಿರುವ ಪೆಟ್ರೋಲ್ ದರ ಮುಂಬೈನಲ್ಲಿ ಪ್ರತಿ ಲೀಟರ್​ಗೆ 107.66 ರೂಪಾಯಿಗೆ ಬಂದು ತಲುಪಿದೆ. ಈ ಮಧ್ಯೆ ಪ್ರತಿ ಲೀಟರ್​ಗೆ 15 ರಿಂದ 20 ಪೈಸೆ ಇಳಿಕೆಯಾಗಿದೆ.

oil-rates-slashed-after-35-days
ಬರೋಬ್ಬರಿ 35 ದಿನಗಳ ಬಳಿಕ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

By

Published : Aug 22, 2021, 10:54 AM IST

ನವದೆಹಲಿ:ಕಳೆದೊಂದು ತಿಂಗಳಿನಿಂದ ಸ್ಥಿರತೆ ಕಾಯ್ದುಕೊಂಡಿ ತೈಲ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಸ್ಟೇಟ್ ರನ್​ ಆಯಿಲ್​ ಮಾರ್ಕೆಟಿಂಗ್ ಕಂಪನಿಯ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲಿ ಇಳಿಕೆಯಾಗಿದೆ. ಭಾನುವಾರದ ಪೆಟ್ರೋಲ್​ ಬೆಲೆಯಲ್ಲಿ ಪ್ರತಿ ಲೀಟರ್​ಗೆ 15ರಿಂದ 20 ಪೈಸೆ ಹಾಗೂ ಡೀಸೆಲ್​​ನ ಪ್ರತಿ ಲೀಟರ್​ಗೆ 18ರಿಂದ 20 ಪೈಸೆ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳಿನಿಂದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್​ಗೆ 101.64 ರೂಪಾಯಿಯಂತೆ ಹಾಗೂ ಡೀಸೆಲ್ ಪ್ರತಿ ಲೀಟರ್​ಗೆ 89.07 ರೂಪಾಯಿಯಂತೆ ಲಭ್ಯವಾಗುತ್ತಿದೆ. ಆದರೆ ಮುಂಬೈನಲ್ಲಿ ಈ ದರದಲ್ಲಿ ಭಾರಿ ವ್ಯತ್ಯಾಸವಿದ್ದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.66 ಹಾಗೂ ಡೀಸೆಲ್​​​ಗೆ 96.64 ರೂಪಾಯಿ ನೀಡಬೇಕಿದೆ.

ಇಂದಿನ ತೈಲ ದರದ ವಿವರ

ಕಳೆದ ಮೇ 29ರಂದು ಮುಂಬೈ ಮಹಾನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿತ್ತು. ಇದಾದ ಬಳಿಕ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ.

ಆದರೆ ತಮಿಳುನಾಡಿನಲ್ಲಿ ರಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂಪಾಯಿ ಶುಲ್ಕ ಕಡಿತಗೊಳಿಸಿ ಲೀಟರ್ ಪಟ್ರೋಲ್​ ಈಗ 99.32 ರೂಪಾಯಿಗೆ ಲಭ್ಯವಾಗುತ್ತಿದೆ.

ಕೊನೆಯ ಬಾರಿ ಅಂದರೆ ಜುಲೈ 17ರಂದು ಕೊನೆಯ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು ಬಿಟ್ಟರೆ ಈವರೆಗೆ ಇಳಿಕೆಯಾಗಿರಲಿಲ್ಲ. 35 ದಿನಗಳ ಬಳಿಕ ಇದೀಗ ತೈಲ ಬೆಲೆಯಲ್ಲಿ ಇಳಿಕೆ ಕಂಡಿದೆ.

ABOUT THE AUTHOR

...view details