ನವದೆಹಲಿ:ಎರಡು ದಿನಗಳ ವಿರಾಮದ ನಂತರ ಇಂಧನ ಬೆಲೆಗಳಲ್ಲಿ ಸ್ವಲ್ಪ ಮಟ್ಟದ ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಮೇಲೆ 35 ಪೈಸೆ ಹೆಚ್ಚಾಗಿದ್ದು, ಇವುಗಳ ಬೆಲೆ ಕ್ರಮವಾಗಿ 107 ರೂಪಾಯಿ ಮತ್ತು 96 ರೂಪಾಯಿ ತಲುಪಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆ 113 ರೂಪಾಯಿ, ಡೀಸೆಲ್ನ ಬೆಲೆ 104.75 ರೂಪಾಯಿಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 104.83 ರೂಪಾಯಿ ಇದೆ.
ಮೆಟ್ರೋ ನಗರಗಳಲ್ಲಿ ತೈಲ ಬೆಲೆ ಮುಂಬೈನಲ್ಲಿ ಅತಿ ಹೆಚ್ಚಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಮೌಲ್ಯ ವರ್ಧಿತ ತೆರಿಗೆ ಅಥವಾ ವ್ಯಾಟ್ನ ಏರಿಳಿತದಿಂದಾಗಿ ಬೆಲೆ ಕಡಿಮೆಯಾಗುತ್ತದೆ. ಭಾರತ ಸರ್ಕಾರದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ ಪೆಟ್ರೋಲಿಯಂ ಪ್ರತಿದಿನವೂ ಬೆಲೆಯನ್ನು ನಿಗದಿಪಡಿಸುತ್ತವೆ.
ಭಾರತದ ಮಹಾನಗರಗಳಲ್ಲಿ ತೈಲ ಬೆಲೆ ಇಂತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ, ಕಚ್ಚಾತೈಲದಲ್ಲಿ ಬೆಲೆ, ರೂಪಾಯಿ ಮತ್ತು ಡಾಲರ್ ನಡುವಿನ ಮೌಲ್ಯ ಮುಂತಾದ ಅಂಶಗಳನ್ನು ಆಧರಿಸಿ ತೈಲ ಕಂಪನಿಗಳು, ತೈಲ ಬೆಲೆಯನ್ನು ಹೆಚ್ಚಿಸುವ ಮತ್ತು ಇಳಿಸುವ ಕೆಲಸ ಮಾಡುತ್ತವೆ.
ಇದನ್ನೂ ಓದಿ:ಮಕ್ಕಳನ್ನು ಕಟ್ಟಿಹಾಕಿದ ತಾಯಿ, ತಲೆ ಕೆಳಗಾಗಿ ನೇತು ಹಾಕಿದ ವ್ಯಕ್ತಿ: ಪೊಲೀಸರಿಂದ ತನಿಖೆ