ಕರ್ನಾಟಕ

karnataka

ETV Bharat / bharat

ಸತತ 5ನೇ ದಿನವೂ ತೈಲ ದರ ಏರಿಕೆ.. ಬೆಂಗಳೂರಲ್ಲಿ ಎಷ್ಟಿದೆ ಪೆಟ್ರೋಲ್​, ಡೀಸೆಲ್​ ಬೆಲೆ? - ಬೆಂಗಳೂರು ತೈಲ ದರ

ತೈಲ ದರ ಸತತವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ತೈಲ ದರದ ಮಾಹಿತಿ ಇಲ್ಲಿದೆ.

oil-prices-increased-5th-consecutive-day
ಸತತ 5ನೇ ದಿನವೂ ತೈಲ ದರ ಏರಿಕೆ..ಬೆಂಗಳೂರಲ್ಲಿ ಎಷ್ಟಿದೆ ದರ..?

By

Published : Oct 9, 2021, 10:17 AM IST

Updated : Oct 9, 2021, 10:26 AM IST

ನವದೆಹಲಿ: ದೇಶದಲ್ಲಿಂದು ಸತತ 5ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 30 ಪೈಸೆ ಹಾಗೂ ಡೀಸೆಲ್​ ಮೇಲೆ 35 ಪೈಸೆಯಷ್ಟು ತೈಲ ಕಂಪನಿಗಳು ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 30 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 103.54 ರೂ. ನಿಂದ 103.84 ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 92.12 ರೂ. ನಿಂದ 92.47 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 109.83 ರೂ.ಗೆ ಏರಿಕೆಯಾಗಿದ್ದು, ಡೀಸೆಲ್​ 100.29ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 1 ಲೀಟರ್​ ಪೆಟ್ರೋಲ್ ಮೇಲೆ 32 ಪೈಸೆ ಹೆಚ್ಚಾಗಿ 107. 46 ರೂಪಾಯಿಗೆ ತಲುಪಿದೆ. ಡೀಸೆಲ್​ 98.15 ರೂಪಾಯಿಗೆ ತಲುಪಿದೆ.

ಪ್ರಮುಖ ನಗರಗಳ ತೈಲ ದರ

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದ್ದು, ಡೀಸೆಲ್​ ಬೆಲೆಯೂ ನೂರರ ಗಡಿ ತಲುಪಲಿದೆ.

ಇದನ್ನೂ ಓದಿ:ಮತ್ತೊಮ್ಮೆ ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾ ಸರ್ವರ್ ಡೌನ್!

Last Updated : Oct 9, 2021, 10:26 AM IST

ABOUT THE AUTHOR

...view details