ಕರ್ನಾಟಕ

karnataka

ETV Bharat / bharat

ನವಜಾತ ಶಿಶುವಿನ ತಲೆ ಕಚ್ಚಿಕೊಂಡು ಬಂದ ಬೀದಿ ನಾಯಿ: ಬೆಚ್ಚಿಬಿದ್ದ ಹೈದರಾಬಾದ್ ಜನ - ನವಜಾತ ಶಿಶುವಿನ ತಲೆಯನ್ನು ಕಚ್ಚಿಕೊಂಡು ಓಡಾಡಿದ ನಾಯಿ

ಸಹರಾ ಗೇಟ್ ಬಳಿಯ ನಿರ್ಜನ ಪ್ರದೇಶದಲ್ಲಿ ನಾಯಿಯೊಂದು ನವಜಾತ ಶಿಶುವಿನ ತಲೆಯನ್ನು ಕಚ್ಚಿಕೊಂಡು ಓಡಾಡಿದೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನವಜಾತ ಶಿಶುವಿನ ತಲೆ ಕಚ್ಚಿಕೊಂಡು ಬಂದ ಬೀದಿ ನಾಯಿ
ನವಜಾತ ಶಿಶುವಿನ ತಲೆ ಕಚ್ಚಿಕೊಂಡು ಬಂದ ಬೀದಿ ನಾಯಿ

By

Published : Mar 13, 2022, 6:13 PM IST

Updated : Mar 14, 2022, 1:04 PM IST

ಹೈದರಾಬಾದ್(ತೆಲಂಗಾಣ): ವನಸ್ಥಲಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಸಹರಾ ಗೇಟ್ ಬೆಚ್ಚಿಬೀಳಿಸುವ ಘಟನೆಯೊಂಂದು ಇಂದು ನಡೆದಿದೆ. ನವಜಾತ ಶಿಶುವಿನ ತಲೆಯನ್ನು ಬೀದಿ ನಾಯಿಯೊಂದು ಕಚ್ಚಿಕೊಂಡು ಬಡಾವಣೆ ಬಳಿ ಓಡಾಡಿದೆ.

ಸಹರಾ ಗೇಟ್ ಬಳಿಯ ನಿರ್ಜನ ಪ್ರದೇಶದಲ್ಲಿ ನಾಯಿಯೊಂದು ನವಜಾತ ಶಿಶುವಿನ ತಲೆಯನ್ನು ಕಚ್ಚಿಕೊಂಡು ಓಡಾಡಿದೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಇವ್ನು ಕೊಡುವ ಸೂಪ್ ಸೇವಿಸಿದ್ರೆ ಕಥೆ ಅಷ್ಟೇನೆ.. ಬೆಚ್ಚಿಬೀಳಿಸುತ್ತೆ ಈತನ ಕೃತ್ಯ!

ವನಸ್ಥಲಿಪುರಂ ಪೊಲೀಸರಿಗೆ ಈ ಸಂಬಂಧ ಸ್ಥಳೀಯರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶ್ವಾನದಳದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮಗುವಿನ ತಲೆಯನ್ನು ಬೀದಿ ನಾಯಿ ಎಲ್ಲಿಂದ ತಂದಿದೆ ಎಂಬ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Mar 14, 2022, 1:04 PM IST

For All Latest Updates

ABOUT THE AUTHOR

...view details