ಕರ್ನಾಟಕ

karnataka

By

Published : Sep 14, 2022, 10:22 AM IST

ETV Bharat / bharat

"ಹಿಂದಿ ಎಲ್ಲ ಭಾಷೆಗಳ ಸ್ನೇಹಿತ, ಮಾತೃಭಾಷೆ ಜೊತೆ ಹಿಂದಿ ಬಳಸುವ ಪ್ರತಿಜ್ಞೆ ಮಾಡಿ" ಎಂದ ಅಮಿತ್ ಶಾ

ಹಿಂದಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.

Hindi day wish
Hindi day wish

ನವದೆಹಲಿ: ಸೆಪ್ಟೆಂಬರ್ 14 ಹಿಂದಿ ದಿವಸ್‌. ಕೆಲವೊಂದು ರಾಜ್ಯಗಳಲ್ಲಿ ಇದರ ಆಚರಣೆ ಮಾಡಲಾಗ್ತಿದೆ. ಆದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದಕ್ಕೆ ಇನ್ನಿಲ್ಲದ ವಿರೋಧ ವ್ಯಕ್ತವಾಗಿದೆ. ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ದಿನದ ಶುಭಾಶಯ ಕೋರಿದ್ದಾರೆ. 'ಭಾರತದ ಎಲ್ಲ ಭಾಷೆಗಳ ಸ್ನೇಹಿತ ಹಿಂದಿ. ಅಧಿಕೃತ ಭಾಷೆಯಾಗಿ ಇಡೀ ದೇಶವನ್ನು ಏಕತೆಯಲ್ಲಿ ಒಂದುಗೂಡಿಸುತ್ತದೆ' ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ, ದೇಶವಾಸಿಗಳು ತಮ್ಮ ಮಾತೃಭಾಷೆಯ ಜೊತೆಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಕ್ರಮೇಣವಾಗಿ ಬಳಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ. ಮಾತೃಭಾಷೆ ಹಾಗೂ ಅಧಿಕೃತ ಭಾಷೆಯ ಸಮನ್ವಯದಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂದಿ ಸೇರಿದಂತೆ ಎಲ್ಲ ಸ್ಥಳೀಯ ಭಾಷೆಗಳ ಸಮಾನ ಅಭಿವೃದ್ಧಿಗೆ ಬದ್ಧವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಹಿಂದಿ ಪ್ರಾಚೀನ ನಾಗರೀಕತೆ ಮತ್ತು ಆಧುನಿಕ ಪ್ರಗತಿಯ ನಡುವಿನ ಸೇತುವೆಯಾಗಿದೆ. ಹಿಂದಿ ಭಾಷೆಯ ರಕ್ಷಣೆ ಮತ್ತು ಪ್ರಚಾರದಲ್ಲಿ ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳಿಗೆ ನಾನು ನಮಸ್ಕರಿಸುತ್ತೇನೆ. ಎಲ್ಲರಿಗೂ 'ಹಿಂದಿ ದಿವಸ್' ಶುಭಾಶಯಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹಿಂದಿ ದಿವಸ್ ವಿರೋಧಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ: ಪೊಲೀಸರಿಂದ ಹೋರಾಟಗಾರರಿಗೆ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ನಿಮ್ಮೆಲ್ಲರಿಗೂ ಹಿಂದಿ ದಿನದ ಶುಭಾಶಯಗಳು. ಹಿಂದಿಯನ್ನು ಸಮರ್ಥ ಭಾಷೆಯನ್ನಾಗಿ ಮಾಡಲು ವಿವಿಧ ಕ್ಷೇತ್ರದ ನಾಯಕರು ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಹಿಂದಿ ಭಾಷೆ ಬಲವಾದ ಗುರುತು ಮೂಡಿಸುತ್ತಿರುವುದು ಎಲ್ಲರ ಪ್ರಯತ್ನದ ಫಲವಾಗಿದೆ ಎಂದಿದ್ದಾರೆ.

ಭಾರತದ ಒಕ್ಕೂಟದ ಅಧಿಕೃತ ಭಾಷೆಯಾಗಿ ಹಿಂದಿ ಘೋಷಣೆಯಾದ ಬಳಿಕ ಪ್ರತಿವರ್ಷ ಸೆಪ್ಟೆಂಬರ್​ 14ರಂದಿ ಹಿಂದಿ ದಿವಸ್​ ಆಚರಣೆ ಮಾಡಲಾಗ್ತಿದೆ. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್​ಲಾಲ್​ ನೆಹರು ಅವರು ಸೆಪ್ಟೆಂಬರ್​​ 14 ಅನ್ನು ಹಿಂದಿ ದಿವಸ್​ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಸೆಪ್ಟೆಂಬರ್​​ 14, 1949ರಂದು ಭಾರತದ ಒಕ್ಕೂಟದ ಅಧಿಕೃತ ಭಾಷೆಯಾಗಿ ಹಿಂದಿ ಅಂಗಿಕರಿಸಲ್ಪಟ್ಟಿದೆ. ಹಿಂದಿ ವಿಶ್ವದಲ್ಲೇ ಹೆಚ್ಚಾಗಿ ಮಾತನಾಡಲ್ಪಡುವ 4ನೇ ದೊಡ್ಡ ಭಾಷೆಯಾಗಿದೆ.

ABOUT THE AUTHOR

...view details