ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಸಾರಿಗೆ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ವೇಮುಲ ಪ್ರಶಾಂತ್ ರೆಡ್ಡಿ ಅವರ ಅಧಿಕೃತ ನಿವಾಸದಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕಯೊಬ್ಬರು ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಜಾಮಾಬಾದ್ ಜಿಲ್ಲೆಯ ವೇಲ್ಪುರದಲ್ಲಿರುವ ಸಚಿವರ ಅಧಿಕೃತ ನಿವಾಸದ ಕೊಠಡಿಯೊಂದರಲ್ಲಿ 19 ವರ್ಷದ ದೇವೇಂದ್ರ ಎಂಬಾತ ನೇಣು ಬಿಗಿದುಕೊಂಡಿದ್ದಾರೆ. ಈ ವಿಷಯ ತಿಳಿದು ತಕ್ಷಣವೇ ಸ್ಥಳೀಯರು ದೇವೇಂದ್ರರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೂ, ಅದು ಸಫಲವಾಗದೇ ಮಾರ್ಗಮಧ್ಯೆಯೇ ದೇವೇಂದ್ರ ಮೃತಪಟ್ಟಿದ್ದಾರೆ. ಇದರ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.