ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆ, ಹಿಂಸಾಚಾರಕ್ಕೆ ಕುಮ್ಮಕ್ಕು ಆರೋಪ: ಖಾಲ್ಸಾ ಟಿವಿ ಗೆ 50 ಸಾವಿರ ಪೌಂಡ್ ದಂಡ - ಖಲ್ಸಾ ಟೆಲಿವಿಷನ್‌ ಲಿಮಿಟೆಡ್​

ಬ್ರಿಟನ್‌ನಲ್ಲಿರುವ ಸಿಖ್ಖರನ್ನು ಪರೋಕ್ಷವಾಗಿ ಹಿಂಸಾಚಾರಕ್ಕೆ ಪ್ರಚೋದಿಸುವ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಖಾಲ್ಸಾ ಟೆಲಿವಿಷನ್‌ ಲಿಮಿಟೆಡ್​ಗೆ 50 ಸಾವಿರ ಪೌಂಡ್ ದಂಡವನ್ನು ಬ್ರಿಟನ್ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ‘ದಿ ಆಫೀಸ್ ಕಮ್ಯುನಿಕೇಷನ್ಸ್‌‘ ವಿಧಿಸಿದೆ.

Ofcom
Ofcom

By

Published : Feb 13, 2021, 6:38 PM IST

ಲಂಡನ್: ಹಿಂಸಾಚಾರಕ್ಕೆ ಕರೆ ನೀಡುವ ಹಾಗೂ ಭಯೋತ್ಪಾದಕ ವಿಷಯ ಉಲ್ಲೇಖಿಸಿರುವ ಸಂಗೀತದ ವಿಡಿಯೊ ಮತ್ತು ಚರ್ಚಾ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕಾಗಿ ಬ್ರಿಟನ್‌ ಮಾಧ್ಯಮದ ಮೇಲೆ ನಿಗಾ ಇಡುವ ಸಂಸ್ಥೆಯೊಂದು ಖಾಲ್ಸಾ ಟೆಲಿವಿಷನ್‌ ಲಿಮಿಟೆಡ್​ಗೆ 50 ಸಾವಿರ ಪೌಂಡ್ ದಂಡ ವಿಧಿಸಿದೆ.

ಬ್ರಿಟನ್ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ‘ದಿ ಆಫೀಸ್ ಕಮ್ಯುನಿಕೇಷನ್ಸ್‌‘ (ಆಫ್‌ಕಾಮ್) ಟ್ವೀಟ್​ ಮಾಡಿದ್ದು, ಬ್ರಿಟನ್‌ನಲ್ಲಿರುವ ಸಿಖ್ಖರನ್ನು ಪರೋಕ್ಷವಾಗಿ ಹಿಂಸಾಚಾರಕ್ಕೆ ಪ್ರಚೋದಿಸುವ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನಾವು ಇಂದು ಕೆಟಿವಿಗೆ 50,000 ಪೌಂಡ್ ದಂಡ ವಿಧಿಸಿದ್ದೇವೆ. ಇನ್ನುಮುಂದೆ ಇಂಥ ವಿಷಯಗಳನ್ನು ಮರಳಿ ಪ್ರಸಾರ ಮಾಡಬಾರದು. 20,000 ಪೌಂಡ್ ಅನ್ನು ಸಂಗೀತ ವಿಡಿಯೋ ಪ್ರಸಾರ ಮಾಡಿದ್ದಕ್ಕೆ ಮತ್ತು 30,000 ಪೌಂಡ್​ಗಳನ್ನು ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

2018ರ ಜುಲೈ 4, 7 ಮತ್ತು 9 ರಂದು ಕೆಟಿವಿ ಬಗ್ಗಾ ಮತ್ತು ಶೇರಾ ಎಂಬ ಸಂಗೀತದ ವಿಡಿಯೋವನ್ನು ಪ್ರಸಾರ ಮಾಡಿತ್ತು. ಈ ಕುರಿತು ತನಿಖೆಗೆ ಒಳಪಡಿಸಿದಾಗ, ಪರೋಕ್ಷವಾಗಿ ಕೊಲೆ ಮತ್ತು ಹಿಂಸಾಚಾರಕ್ಕಾಗಿ ಕರೆ ನೀಡುವ ಅಂಶಗಳಿರುವುದಾಗಿ ತಿಳಿದುಬಂದಿತ್ತು. ಜೊತೆಗೆ 2019ರ ಮಾರ್ಚ್ 30 ರಂದು ಚರ್ಚಾ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲಾಗಿತ್ತು.

ABOUT THE AUTHOR

...view details