ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ನೆನಪು, ಆ ದನಿ ಮಾತ್ರ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿಯಲಿದೆ.
ಭಾರತ ಸಿನಿಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿಯಾಗಿರುವ ಲತಾ ಮಂಗೇಶ್ಕರ್ ಗಾನ ಕೋಗಿಲೆ ಎಂದೇ ಹೆಸರುವಾಸಿ. ಇವರಿಗೆ ಪ್ರತಿಸ್ಪರ್ಧಿಗಳಿಲ್ಲವೆಂದರೆ ತಪ್ಪಾಗಲ್ಲ. ಸುಮಾರು 36 ಭಾರತೀಯ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ.
ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಸಾಧನೆ ಅಪಾರ. ಇವರ ಹಾಡುಗಳೆಲ್ಲವೂ ಇವರಿಗೆ ಅಚ್ಚುಮೆಚ್ಚು. ಆದ್ರೆ ಇವರು ಹಾಡಿದ ಹಾಡುಗಳಲ್ಲಿ 5 ಹಾಡುಗಳು ಮಾತ್ರ ಸಾರ್ವಕಾಲಿಕ ಮೆಚ್ಚಿನವುಗಳಾಗಿವೆ. ಅವುಗಳೆಂದರೆ,
1. ಖ್ವಾಬ್ ಬನ್ಕರ್ ಕೋಯಿ ಆಯೇಗಾ (ರಜಿಯಾ ಸುಲ್ತಾನ್)
2. ಚುನ್ರಿ ಸಂಭಾಲ್ ಗೋರಿ (ಬಾಹರೋನ್ ಕೆ ಸಪ್ನೆ)