ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಬ್ರಾಹ್ಮಣರಿಗೆ ಮೀಸಲಿದ್ದ ಸ್ಮಶಾನ: ಜನರ ವಿರೋಧದ ಬಳಿಕ 'ಸ್ವರ್ಗದ್ವಾರ' ವಾಗಿ ಬದಲು

155 ವರ್ಷಗಳಷ್ಟು ಹಳೆಯದಾದ ಒಡಿಶಾದ ಕೇಂದ್ರಪಾರ ಪಟ್ಟಣದ ಘಾಟ್‌ನಲ್ಲಿರುವ ಸ್ಮಶಾನವು ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದ್ದು, ವಿರೋಧದ ಬಳಿಕ ಅದನ್ನು ಎಲ್ಲರಿಗೆ ಮುಕ್ತಗೊಳಿಸಲಾಗಿದೆ.

ಒಡಿಶಾದಲ್ಲಿ ಬ್ರಾಹ್ಮಣರಿಗೆ ಮೀಸಲಿದ್ದ ಸ್ಮಶಾನ
ಒಡಿಶಾದಲ್ಲಿ ಬ್ರಾಹ್ಮಣರಿಗೆ ಮೀಸಲಿದ್ದ ಸ್ಮಶಾನ

By ETV Bharat Karnataka Team

Published : Nov 22, 2023, 11:02 PM IST

ಭುವನೇಶ್ವರ್​, ಒಡಿಶಾ:ಒಡಿಶಾದ ಕೇಂದ್ರಪಾರ ಪಟ್ಟಣದಲ್ಲಿರುವ ಪುರಸಭೆಯ ವ್ಯಾಪ್ತಿಗೆ ಬರುವ ಸ್ಮಶಾನವನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿಗೊಳಿಸಲಾಗಿದ್ದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಸ್ಮಶಾನವನ್ನು ಎಲ್ಲರಿಗೂ ಮುಕ್ತಗೊಳಿಸಿದ್ದಲ್ಲದೇ, ಸ್ವರ್ಗದ್ವಾರ ಎಂದು ಹೆಸರು ಬದಲಿಸಲಾಗಿದೆ.

ಸ್ಮಶಾನದ ಮುಂದೆ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ಬೋರ್ಡ್​ ಹಾಕಲಾಗಿತ್ತು. ಒಡಿಶಾದ ನಾಗರಿಕ ಮಂಡಳಿಯ ಅಧಿಕಾರಿಗಳು ಟೀಕೆಗಳನ್ನು ಎದುರಿಸಿದ ನಂತರ, ಬುಧವಾರ ಸ್ಮಶಾನದ ಹೆಸರನ್ನು ‘ಸ್ವರ್ಗದ್ವಾರ’ ಎಂದು ಬದಲಾಯಿಸಿದ್ದಾರೆ. ಶವಗಳ ಅಂತ್ಯಕ್ರಿಯೆಯಲ್ಲೂ ತಾರತಮ್ಯ ಮಾಡುವ ಸಮಾಜದಲ್ಲಿನ ಕೊಳಕನ್ನು ಇದು ಬಹಿರಂಗಪಡಿಸುತ್ತದೆ. ಆದಾಗ್ಯೂ, ಸ್ಮಶಾನದ ಕೀಲಿಯು ಇನ್ನೂ ಬ್ರಾಹ್ಮಣ ವ್ಯಕ್ತಿಯ ಬಳಿ ಇದೆ ಎಂದು ಹೇಳಲಾಗಿದೆ.

ದೀರ್ಘಕಾಲ ಬ್ರಾಹ್ಮಣರ ಸ್ಮಶಾನ:155 ವರ್ಷಗಳಷ್ಟು ಹಳೆಯದಾದ ಸ್ಮಶಾನವು ಕೇಂದ್ರಪಾರ ಪಟ್ಟಣದ ಹಜಾರಿಬಾಗಿಚಾ ಪ್ರದೇಶದಲ್ಲಿದೆ. ಸ್ಮಶಾನವನ್ನು ದೀರ್ಘಕಾಲದವರೆಗೆ ಬ್ರಾಹ್ಮಣರ ಅಂತಿಮ ಸಂಸ್ಕಾರಕ್ಕಾಗಿ ಬಳಸಲಾಗುತ್ತಿದ್ದರೂ, ಸರ್ಕಾರದ ಅನುದಾನದಲ್ಲಿ ಸೌಲಭ್ಯವನ್ನು ನವೀಕರಿಸಿದ ನಂತರ ಬ್ರಾಹ್ಮಣರಿಗೆ ಮಾತ್ರ ಎಂಬ ಫಲಕವನ್ನು ಇತ್ತೀಚೆಗೆ ಹಾಕಲಾಗಿತ್ತು. ಇತರ ಜಾತಿಗಳ ಜನರು ತಮ್ಮ ಸಂಬಂಧಿಕರ ಶವಗಳನ್ನು ಹತ್ತಿರದ ಮತ್ತೊಂದು ಸ್ಮಶಾನದಲ್ಲಿ ಹೂಳುವ ಮತ್ತು ಸುಡುತ್ತಿದ್ದರು. ಸ್ಮಶಾನದ ಒತ್ತುವರಿಗೆ ತೀವ್ರ ವಿರೋಧ ಕೇಳಿಬಂದಿತ್ತು.

ಈ ಬಗ್ಗೆ ಮಾತನಾಡಿರುವ ಕೇಂದ್ರಪಾರ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಫುಲ್ಲ ಚಂದ್ರ ಬಿಸ್ವಾಲ್, ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಜಾತಿ ತಾರತಮ್ಯವನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.

ಪುರಸಭೆಯಿಂದ ಕಾನೂನು ಉಲ್ಲಂಘನೆ:ಒಡಿಶಾ ದಲಿತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಜೆನಾ ಮಾತನಾಡಿ, ಪುರಸಭೆಯು ಹಿಂದಿನಿಂದಲೂ ಬ್ರಾಹ್ಮಣರಿಗಾಗಿ ಮಾತ್ರ ಸ್ಮಶಾನವನ್ನು ಮೀಸಲಿಟ್ಟಿತ್ತು. ಈ ಮೂಲಕ ಸರ್ಕಾರಿ ಸಂಸ್ಥೆ ಕಾನೂನು ಉಲ್ಲಂಘಿಸಿ ಜಾತಿ ತಾರತಮ್ಯ ಮಾಡಿದೆ. ಇದನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಗಯಾಧರ್ ಧಾಲ್ ಮಾತನಾಡಿ, ಪೌರಕಾರ್ಮಿಕರು ಬ್ರಾಹ್ಮಣರಿಗಾಗಿ ಮಾತ್ರ ಸ್ಮಶಾನ ನಡೆಸುವುದು ಕಾನೂನು ಬಾಹಿರವಾಗಿದೆ. ಶವಗಳ ಅಂತಿಮ ಸಂಸ್ಕಾರವನ್ನು ಈ ಸ್ಮಶಾನದಲ್ಲಿ ಮಾಡುವ ಹಕ್ಕು ಇತರ ಜಾತಿಯವರಿಗೂ ನೀಡಬೇಕು ಎಂದು ಕೋರಿದ್ದರು.

'ಬ್ರಾಹ್ಮಣರಿಗೆ ಮಾತ್ರ' ಸ್ಮಶಾನವು ಎಲ್ಲಾ ಜಾತಿಗಳ ಜನರಿಗೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಬ್ರಾಹ್ಮಣರಿಗೆ ಪ್ರತ್ಯೇಕ ಸ್ಮಶಾನ ಸ್ಥಳವನ್ನು ನೀಡುವುದು ಜಾತಿ ಅಸಮಾನತೆಯನ್ನು ಉತ್ತೇಜಿಸಿದಂತಾಗುತ್ತದ ಎಂದು ಅವರು ಹೇಳಿದರು.

ಇದನ್ನೂ ಓದಿ:ಸ್ಮಶಾನ ಇಲ್ಲದೇ ಅಂತ್ಯಕ್ರಿಯೆಗೆ ಪರದಾಟ: ಕೆಸರು ತುಂಬಿದ ಗುಂಡಿಯಲ್ಲೇ ಸಮಾಧಿ!!

ABOUT THE AUTHOR

...view details