ಭುವನೇಶ್ವರ (ಒಡಿಶಾ):ಭುವನೇಶ್ವರದ ಚಿಕಣಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ 8 ಅಡಿ ಉದ್ದದ ಭಾವಚಿತ್ರವನ್ನು ಆಹಾರ ಧಾನ್ಯಗಳನ್ನು ಬಳಸಿ ರಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಹಾನಿ, 'ಈ ಭಾವಚಿತ್ರವು ಒಡಿಶಾದ ಜನರಿಂದ ಪ್ರಧಾನಿಗೆ ಉಡುಗೊರೆಯಾಗಿದೆ. ನಾನು ಈ ಭಾವಚಿತ್ರದಲ್ಲಿ ಒಡಿಶಾದ ಸಾಂಪ್ರದಾಯಿಕ ಪಟ್ಟಚಿತ್ರ ಕಲಾ ವಿನ್ಯಾಸವನ್ನು ಬಳಸಿದ್ದೇನೆ' ಎಂದು ಹೇಳಿದರು.
ಪ್ರಧಾನಮಂತ್ರಿಯ ಹೃದಯದಲ್ಲಿ ದೇಶದ ಭೂಪಟವನ್ನು ಚಿತ್ರಿಸಿರುವ ಕಲಾವಿದೆ, 'ಇದು ಪ್ರಧಾನಿ ನಮ್ಮ ಹೃದಯದಲ್ಲಿ ನೆಲೆಸಿರುವಂತೆಯೇ ನಮ್ಮ ದೇಶವು ಪ್ರಧಾನಮಂತ್ರಿಯವರ ಹೃದಯದಲ್ಲಿ ನೆಲೆಯಾಗಿದೆ ಎಂಬುದನ್ನು ಪ್ರತಿನಿಧಿಸುತ್ತದೆ' ಎಂದರು.