ಕರ್ನಾಟಕ

karnataka

ETV Bharat / bharat

Odisha Train tragedy: ಒಡಿಶಾ ರೈಲು ದುರಂತ: ಡಿಎನ್‌ಎ ಪರೀಕ್ಷೆಯಿಂದ 29 ಶವಗಳ ಗುರುತು ಪತ್ತೆ - ಭುವನೇಶ್ವರದ ಏಮ್ಸ್‌

ಒಡಿಶಾ ರೈಲು ದುರಂತದಲ್ಲಿ ಮೃಪಟ್ಟಿದ್ದ 81 ಅಪರಿಚಿತ ಶವಗಳ ಪೈಕಿ 29 ಮೃತದೇಹಗಳ ಗುರುತನ್ನು ಡಿಎನ್ಎ ಹೊಂದಾಣಿಕೆಯ ಮೂಲಕ ಪತ್ತೆ ಮಾಡಲಾಗಿದೆ.

Odisha train tragedy
Odisha train tragedy: ಡಿಎನ್‌ಎ ಪರೀಕ್ಷೆಯಿಂದ 29 ಶವಗಳ ಗುರುತು ಪತ್ತೆ, ಇಂದು ಹಸ್ತಾಂತರ..

By

Published : Jun 30, 2023, 9:44 PM IST

ಭುವನೇಶ್ವರ:ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ ಸುಮಾರು ಒಂದು ತಿಂಗಳ ನಂತರ ಡಿಎನ್‌ಎ ಪರೀಕ್ಷೆಯ ಮೂಲಕ 29 ಸಂತ್ರಸ್ತರ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ಗುರುತಿಸುವಲ್ಲಿ ತೊಂದರೆಯಾದ ಕಾರಣ 81 ಪ್ರಯಾಣಿಕರ ಶವಗಳನ್ನು ಭುವನೇಶ್ವರದ ಏಮ್ಸ್‌ನಲ್ಲಿ ಕಂಟೈನರ್‌ಗಳಲ್ಲಿ ಇರಿಸಲಾಗಿತ್ತು. 78 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗಾಗಿ ನವದೆಹಲಿಯ ಏಮ್ಸ್‌ಗೆ ಕಳುಹಿಸಲಾಗಿತ್ತು. ಈ ಪೈಕಿ 29 ಶವಗಳ ಡಿಎನ್‌ಎ ವರದಿಗಳು ಸಿದ್ಧವಾಗಿದ್ದು, ಗುರುತು ದೃಢಪಟ್ಟಿದೆ.

ಇದನ್ನೂ ಓದಿ:Odisha Train Tragedy: ರೈಲ್ವೆ ಜೆಇ ಬಾಡಿಗೆ ಮನೆಯಲ್ಲಿ ಸಿಬಿಐ ತನಿಖೆ: ಯಾವುದೇ ಸಿಬ್ಬಂದಿ ನಾಪತ್ತೆಯಾಗಿಲ್ಲ- ರೈಲ್ವೆ ಇಲಾಖೆ ಸ್ಪಷ್ಟನೆ

ಮೃತರು ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ನಿವಾಸಿಗಳು ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಪಡೆಯುವ ಸಂಬಂಧಿಕರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೂನ್ 2ರಂದು ಸಂಭವಿಸಿದ ರೈಲು ಅಪಘಾತದಲ್ಲಿ 290ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. 1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:ಒಡಿಶಾ ರೈಲು ದುರಂತ : ಕೋಲ್ಕತ್ತಾದಲ್ಲಿ ಸಿಲುಕಿದ ಕರ್ನಾಟಕದ ವಾಲಿಬಾಲ್​ ತಂಡಕ್ಕೆ ವಿಮಾನ ವ್ಯವಸ್ಥೆ

ಮೃತರ ಸಂಬಂಧಿಕರ ಡಿಎನ್‌ಎ ಮಾದರಿ ಸಂಗ್ರಹ:ಮೃತರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿವೆ. ಆದಾಗ್ಯೂ, ಸತ್ತವರಲ್ಲಿ ಕೆಲವರನ್ನು ಭೌತಿಕವಾಗಿ ಗುರುತಿಸುವುದು ಅಸಾಧ್ಯವಾಗಿತ್ತು. ಕೆಲವು ಮೃತದೇಹಗಳು ಒಂದಕ್ಕಿಂತ ಹೆಚ್ಚು ಹಕ್ಕುದಾರರನ್ನು ಹೊಂದಿದ್ದರಿಂದ, ಡಿಎನ್ಎ ಪರೀಕ್ಷೆಯ ಮೂಲಕ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿತ್ತು. ಮೃತರ ಗುರುತನ್ನು ಖಚಿತಪಡಿಸಿಕೊಳ್ಳಲು ಅವರ ಡಿಎನ್‌ಎ ಮಾದರಿಗಳನ್ನು ನೀಡುವಂತೆ ಸಂಬಂಧಿಕರನ್ನು ಕೇಳಲಾಗಿತ್ತು.

ಇದನ್ನೂ ಓದಿ:Sukesh Chandrashekar: ರೈಲು ದುರಂತ ಸಂತ್ರಸ್ತರಿಗೆ ₹10 ಕೋಟಿ ಕೊಡುವೆ, ಸ್ವೀಕರಿಸಿ; ಜೈಲಿನಿಂದಲೇ ಸರ್ಕಾರಕ್ಕೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್‌!

ಸಾವಿನ ಸಂಖ್ಯೆ 293ಕ್ಕೇರಿಕೆ :ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗಾಯಗೊಂಡಿದ್ದ ಓರ್ವ ಪ್ರಯಾಣಿಕ ಗುರುವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದ ನಂತರ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 293ಕ್ಕೆ ಏರಿದೆ. ಮೃತರನ್ನು ಬಿಹಾರದ ಜಮುಯಿ ನಿವಾಸಿ ಮನೀಶ್ ಕುಮಾರ್ (24) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಐಸಿಯುನಲ್ಲಿ ಮತ್ತೊಬ್ಬ ಪ್ರಯಾಣಿಕನ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡ 40 ಪ್ರಯಾಣಿಕರನ್ನು ಎಸ್‌ಸಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 10 ಮಂದಿಯನ್ನು ಐಸಿಯುಗೆ ಮತ್ತು ಉಳಿದವರನ್ನು ಇತರ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:Odisha Train Tragedy: ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿರುವ ಬಹನಾಗ ಪ್ರೌಢಶಾಲಾ ಕಟ್ಟಡ ನೆಲಸಮ!

ಬಾಲಸೋರ್ ಭೀಕರ ರೈಲು ದುರಂತದ ಭಯಾನಕ ದೃಶ್ಯ : ಹಳಿ ಮೇಲೆ ಶವಗಳ ಸಾಲು!

ABOUT THE AUTHOR

...view details