ಮಲ್ಕಂಗಿರಿ(ಒಡಿಶಾ): ರಾಜ್ಯದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಒಡಿಶಾ ಸರ್ಕಾರ ಕ್ರಮಕೈಗೊಂಡಿದ್ದರೂ ಹಲವಾರು ರಾಷ್ಟ್ರೀಯ ಕ್ರೀಡಾಪಟುಗಳು ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೆರವಿನ ಕೊರತೆಯಿಂದಾಗಿ ಈಗ ತಮ್ಮ ಜೀವನೋಪಾಯಕ್ಕಾಗಿ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ.
ಅದೇ ರೀತಿ ರಾಷ್ಟ್ರಮಟ್ಟದ ಮಹಿಳಾ ವಾಲಿಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ನುಗುಡಾ ಗ್ರಾಮದ 21 ವರ್ಷದ ಬುಡಕಟ್ಟು ಹುಡುಗಿ ಸಬಿತಾ ಕಾಚಿಮ್, ಈಗ ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಸಬಿತಾ ದಲಿತ ಕುಟುಂಬಕ್ಕೆ ಸೇರಿದವಳು. ಆಕೆಯ ತಂದೆ ತೀರಿಕೊಂಡ ನಂತರ ಕುಟುಂಬದ ಜವಾಬ್ದಾರಿ ಇವರ ಹೇಗಲೇರಿತು. ಜಿಲ್ಲಾ ಮಟ್ಟದಲ್ಲಿ ಅವರ ಉತ್ತಮ ಪ್ರದರ್ಶನದ ನಂತರ, ಅವರನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಯಿತು. ಇವರು ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಉತ್ತಮ ವಾಲಿಬಾಲ್ ಆಟಗಾರ್ತಿಯಾಗಿರುವ ಸಬಿತಾ ಕಾಚಿಮ್ ಪ್ರಸ್ತುತ ಮಲ್ಕಂಗಿರಿಯಲ್ಲಿ ಸರ್ಕಾರಿ ಪದವಿ ಕಾಲೇಜ್ನಲ್ಲಿ ಮೊದಲ ವರ್ಷದ ಪದವಿ ಓದುತ್ತಿದ್ದಾರೆ.