ರಾಯಗಡ್: ಮಧ್ಯಪ್ರದೇಶ ಉದ್ಯಮಿಯೊಬ್ಬರಿಗೆ ಒಡಿಶಾದ ಪೊಲೀಸರು 1 ಲಕ್ಷ 13 ಸಾವಿರ ದಂಡ ವಿಧಿಸಿದ್ದಾರೆ.
ಸಾರಿಗೆ ನಿಯಮ ಉಲ್ಲಂಘನೆ.. ಡ್ರಮ್ ವ್ಯಾಪಾರಸ್ಥನಿಗೆ ಬಿತ್ತು 1 ಲಕ್ಷ 13 ಸಾವಿರ ದಂಡ! - 1 ಲಕ್ಷ 13 ಸಾವಿರ ದಂಡ ಸುದ್ದಿ
ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಅಬ್ಬಬ್ಬಾ ಅಂದ್ರೆ 10 ಸಾವಿರದವರೆಗೂ ದಂಡ ಕಟ್ಟ ಬಹುದು. ಆದ್ರೆ ಇಲ್ಲೊಬ್ಬ ಬೈಕ್ ಸವಾರ ಬರೋಬ್ಬರಿ 1 ಲಕ್ಷ 13 ಸಾವಿರ ದಂಡ ಕಟ್ಟಿದ್ದಾರೆ. ಅಂತದೇನು ಆ ಬೈಕ್ ಸವಾರ ತಪ್ಪು ಮಾಡಿದ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...
ಹೌದು, ಮಧ್ಯಪ್ರದೇಶ ಉದ್ಯಮಿ ಉಪಯೋಗಿಸುತ್ತಿದ್ದ ಬೈಕ್ಗೆ ನೋಂದಣಿ ಇಲ್ಲ. ಅಷ್ಟೇ ಅಲ್ಲ ಅವರು ಹೆಲ್ಮೆಟ್ ಹಾಕಿಕೊಳ್ಳದೆ ಬೈಕ್ ಚಲಾಯಿಸುತ್ತಿದ್ದರು. ಒಡಿಶಾದ ರಾಯಗಡದಲ್ಲಿ ಡ್ರಮ್ ವ್ಯಾಪಾರಸ್ಥರಾಗಿರುವ ಪ್ರಕಾಶ್ ಬಂಜಾರ್ ಬೈಕ್ ಮೇಲೆ 8 ಡ್ರಮ್ಗಳು ಬೇರೆಡೆ ಸಾಗಿಸುತ್ತಿದ್ದರು. ಈ ವೇಳೆ, ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ತಡೆದಿದ್ದಾರೆ.
ಇನ್ನು ಸಂಬಂಧಪಟ್ಟ ದಾಖಲೆಗಳನ್ನು ತೋರಿಸುವಂತೆ ಅಧಿಕಾರಿಗಳು ಪ್ರಕಾಶ್ಗೆ ಕೇಳಿದ್ದಾರೆ. ಆದ್ರೆ ಪ್ರಕಾಶ್ ಬಳಿ ಯಾವುದೇ ದಾಖಲೆ ಇಲ್ಲವಾಗಿದ್ದರಿಂದ ಭಾರಿ ದಂಡ ವಿಧಿಸಿದ್ದಾರೆ. ಆ ಸಮಯದಲ್ಲಿ ಪ್ರಕಾಶ್ ತನ್ನ ಆಪ್ತ ಸ್ನೇಹಿತರಿಂದ ಹಣವನ್ನು ತೆಗೆದುಕೊಂಡು ದಂಡವನ್ನು ಪಾವತಿಸಿದರು.
TAGGED:
1 ಲಕ್ಷ 13 ಸಾವಿರ ದಂಡ