ಕರ್ನಾಟಕ

karnataka

ETV Bharat / bharat

ಒಡಿಶಾದ ವಲಸೆ ಕಾರ್ಮಿಕ ಈಗ ಮಾಲಿವುಡ್​ ನಟ.. ಚಿತ್ರ ಆಸ್ಕರ್​​ಗೆ ನಾಮನಿರ್ದೇಶನ - ಕೇರಳ

ಕೇರಳದ ಹೋಟೆಲ್​​ವೊಂದರಲ್ಲಿ ಕೆಲಸ ಮಾಡುತ್ತಾ, ಜಿಮ್​ಗೆ ಹೋಗುತ್ತಿದ್ದ ಒಡಿಶಾ ಮೂಲದ ವಲಸೆ ಕಾರ್ಮಿಕನ ಬದುಕು ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸ್ಸೆರಿ ಅವರಿಂದ ಬದಲಾಗಿದೆ.

Odisha migrant labourer's transition to Mollywood actor
ಒಡಿಶಾದ ವಲಸೆ ಕಾರ್ಮಿಕ ಈಗ ಮಾಲಿವುಡ್​ ನಟ

By

Published : Mar 21, 2021, 10:34 AM IST

ಕಂಧಮಾಲ್ (ಒಡಿಶಾ): ತನ್ನ ಕುಟುಂಬ ನಿರ್ವಹಣೆಗಾಗಿ ಜೀವನೋಪಾಯ ಹುಡುಕಿಕೊಂಡು ಕೇರಳಕ್ಕೆ ರೈಲು ಹತ್ತಿದ್ದ ವಲಸೆ ಕಾರ್ಮಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ನಟನಾಗಿದ್ದಾನೆ ಹಾಗೂ ಇವರ ನಟನೆಯ ಸಿನಿಮಾವೊಂದು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ ಎಂದರೆ ನೀವು ನಂಬಲೇಬೇಕು.

ಹೌದು.. ಈ ನಟನ ಹೆಸರು ರಾಜ್ ಕುಮಾರ್. ಒಡಿಶಾದ ಕಂಧಮಾಲ್ ಜಿಲ್ಲೆ ಮೂಲದವರಾದ ಇವರು ಕಡುಬಡವರಾಗಿದ್ದು, 12ನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿದರು. ಬಳಿಕ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ವಲಸೆ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು. ಕೇರಳಕ್ಕೆ ಹೋಗಿ ಅಲ್ಲಿನ ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು.

ಹೆಚ್ಚಿನ ಓದಿಗೆ:ಆಸ್ಕರ್ ಪ್ರಶಸ್ತಿಗೆ ಭಾರತದಿಂದ 'ಜಲ್ಲಿಕಟ್ಟು' ಚಿತ್ರ ಆಯ್ಕೆ

ಕೇರಳದಲ್ಲಿ ಜಿಮ್​ಗೆ ಹೋಗುತ್ತಿದ್ದ ವೇಳೆ ಮಲಯಾಳಂ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸ್ಸೆರಿ ಅವರನ್ನ ಭೇಟಿಯಾಗುತ್ತಾರೆ. ಪೆಲ್ಲಿಸ್ಸೆರಿ ಅವರು ರಾಜ್ ಕುಮಾರ್​​ರನ್ನು ತಮ್ಮ ಮನೆಯ ಅಡುಗೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಇವರ ಪರಿಚಯವೇ ರಾಜ್​ ಕುಮಾರ್​ ಸಿನಿಮಾ ರಂಗ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು. ರಾಜ್​ ಕುಮಾರ್​ರ ಸೌಮ್ಯ ಸ್ವಭಾವ, ಕಠಿಣ ಪರಿಶ್ರಮ, ಉತ್ಸಾಹದಿಂದಾಗಿ ಅವಕಾಶಗಳು ಬಂದವು.

ಹಾಗಂತ ಇವರು ದೊಡ್ಡ ಸ್ಟಾರ್​ ನಟನಾಗಿಲ್ಲ. ಆದರೆ ಇಲ್ಲಿಯವರೆಗೆ 'ಜಲ್ಲಿಕಟ್ಟು', 'ಇ ಮಾ ಯು', 'ಸ್ವಾತಂತ್ರ್ಯಂ ಅರ್ಧರಾತ್ರಿಯಿಲ್' ಸೇರಿದಂತೆ ಆರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ತಮ್ಮೂರಿನ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇದೀಗ ರಾಜ್​ ಕುಮಾರ್ ನಟಿಸಿರುವ, ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ 'ಜಲ್ಲಿಕಟ್ಟು' ಸಿನಿಮಾ 2021ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಮುಂದಿನ ದಿನಗಳಲ್ಲಿ ಒಡಿಯಾ ಸಿನಿಮಾಗಳಲ್ಲೂ ನಟಿಸುವ ಆಸೆ ಹೊಂದಿದ್ದಾರೆ ರಾಜ್​ ಕುಮಾರ್​​.

ABOUT THE AUTHOR

...view details