ಭುವನೇಶ್ವರ್, ಒಡಿಶಾ:ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ರೋಗ ಜನರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇಬರ್ಗಢ್ ಮತ್ತು ಸುಂದರ್‌ಗಢ್ ಜಿಲ್ಲೆಗಳಲ್ಲಿ ಸ್ಕ್ರಬ್ ಟೈಫಸ್‌ನಿಂದ ಐವರು ಮೃತಪಟ್ಟಿರುವ ವರದಿಯಾಗಿದೆ. ಈ ಸಾವು ಸಂಭವಿಸಿದ ಹಿನ್ನೆಲೆ ಒಡಿಶಾ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೆಚ್ಚು ಸಾಂಕ್ರಾಮಿಕ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪಿರೋಸಿಸ್ ತಡೆಗಟ್ಟಲು ಸೂಕ್ತ ಬಳಕೆಯೊಂದಿಗೆ ಚಿಕಿತ್ಸಾ ಪ್ರೋಟೋಕಾಲ್ ಅನುಸರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಮೃತಪಟ್ಟವರಲ್ಲಿ ಇಬ್ಬರು ಸೊಹೆಲಾ ತಾಲೂಕಿನವರು. ಬರ್ಗಢ್ ಜಿಲ್ಲೆಯ ಅಟ್ಟಬಿರಾ, ಭೇದೆನ್ ಮತ್ತು ಬರ್ಪಾಲಿ ತಾಲೂಕುಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರನ್ನು ಜಿಲ್ಲೆಯ ಹೊರಗಿನ ಆಸ್ಪತ್ರೆಗಳಲ್ಲಿ ಇಡಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಲ್ಲಾ ಮುಖ್ಯ ಜಿಲ್ಲಾ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ನಿರ್ದೇಶಕರು, ಭುವನೇಶ್ವರ ಕ್ಯಾಪಿಟಲ್ ಆಸ್ಪತ್ರೆಯ ವೈದ್ಯರು, ನಿರ್ದೇಶಕರಿಗೆ ಸೂಚನೆ ನೀಡಿದೆ.
ರಾಜ್ಯದ ಹಲವೆಡೆ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಸಮಯೋಚಿತ ಚಿಕಿತ್ಸೆ ಮುಖ್ಯವಾಗಿದೆ. ರೋಗ ನಿಯಂತ್ರಣಕ್ಕೆ ತುರ್ತು ಕ್ರಮದ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಅಗತ್ಯವಿರುವ ಪರೀಕ್ಷಾ ಕಿಟ್‌ಗಳ ಖರೀದಿ ಮತ್ತು ಪೂರೈಕೆಯ ಮೂಲಕ ಡಿಪಿಎಚ್‌ಎಲ್‌ನಲ್ಲಿ ಪರೀಕ್ಷೆಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಯು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದೆ. ಪಿಯುಒ ಸಂದರ್ಭದಲ್ಲಿ ಪರೀಕ್ಷೆಗಳಿಗೆ ಸಲಹೆ ನೀಡಲು ವೈದ್ಯರನ್ನು ಅಲರ್ಟ್ ಮಾಡಿದೆ. ಈ ರೋಗದ ಬಗ್ಗೆ ಹೆಚ್ಚಿನ ಗಮನದ ಜೊತೆಗೆ ಸಾರ್ವಜನಿಕ ಅರಿವು ಮತ್ತು ಆರಂಭಿಕ ರೋಗನಿರ್ಣಯವನ್ನು ಹೆಚ್ಚಿಸಿ, ಸೂಕ್ತ ಔಷಧಗಳ ದಾಸ್ತಾನು ಬಳಸಲು ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.
ಈ ರೋಗಗಳಿಂದ ಉಂಟಾಗುವ ಎಲ್ಲಾ ಸಾವುಗಳನ್ನು ತನಿಖೆ ಮಾಡಬೇಕು ಮತ್ತು ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತಹ ಕಾಯಿಲೆಗಳಿಗೆ ಸಂಬಂಧಿಸಿದ ಡೇಟಾವನ್ನು ನಿಯಮಿತವಾಗಿ ಎಸ್‌ಎಸ್‌ಯು ಜೊತೆ ನಿಗದಿತ ನಮೂನೆಯಲ್ಲಿ ಹಂಚಿಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಇಲಾಖೆಯು ವಿವಿಧ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸ್ಕ್ರಬ್ ಟೈಫಸ್ ಅನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ. ಇದು ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಸ್ಕ್ರಬ್ ಟೈಫಸ್ ಸೋಂಕಿತ ಚಿಗ್ಗರ್ಸ್ (ಲಾರ್ವಾ ಹುಳಗಳು) ಕಚ್ಚುವಿಕೆಯ ಮೂಲಕ ಜನರಿಗೆ ಹರಡುತ್ತದೆ. ಬರ್ಗಢ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ಮತ್ತು 10 ರ ನಡುವೆ 142 ಮಾದರಿಗಳನ್ನು ಸ್ಕ್ರಬ್ ಟೈಫಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ನಾಲ್ವರು ಪಾಸಿಟಿವ್ ಆಗಿದ್ದು, ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಆಗಸ್ಟ್‌ನಲ್ಲಿ ಬರ್ಗಢ್ ಜಿಲ್ಲೆಯಲ್ಲಿ 168 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಓದಿ:ಕೇರಳದಲ್ಲಿ ಮತ್ತೆ ನಿಫಾ ಉಲ್ಬಣ; ರಾಜ್ಯದಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಂಡ ಸೋಂಕು