ಭುವನೇಶ್ವರ:ಒಡಿಶಾ ಸರ್ಕಾರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಏರಿಸುವ ಘೋಷಣೆ ಮಾಡಿದೆ. ಮೂರು ಪ್ರತಿಶತದಷ್ಟು ಏರಿಕೆ ಮಾಡುವುದಾಗಿ ಘೋಷಿಸಿದೆ.
ಈ ಸಂಬಂಧ ಪ್ರಸ್ತಾವನೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು ಅನುಮೋದನೆ ನೀಡಿದ್ದಾರೆ. ಹೆಚ್ಚಳದ ನಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ 34 ಡಿಎ ಪಡೆಯಲಿದ್ದಾರೆ. ಇದು ಜನವರಿ 1, 2022 ರಿಂದಲೇ ಜಾರಿಗೆ ಬರಲಿದೆ.