ಕರ್ನಾಟಕ

karnataka

ETV Bharat / bharat

ಇದು ಅಚ್ಚರಿ! ಆದರೂ ನಿಜ.. ಮೃತಪಟ್ಟ ಮಗುವಿಗೆ ಸ್ಮಶಾನದಲ್ಲಿ ಜೀವ ಬಂತು!! - ಒಡಿಶಾದಲ್ಲಿ ಮಗುವಿಗೆ ಸ್ಮಶಾನದಲ್ಲಿ ಜೀವ

ಪೋಷಕರು ದುಃಖದಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎಂಬುವಷ್ಟರಲ್ಲಿ ಮಗು ಅಳಲು ಶುರು ಮಾಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ತಕ್ಷಣವೇ ಮರಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ..

odisha-dead
ಸ್ಮಶಾನದಲ್ಲಿ ಜೀವ

By

Published : Jan 21, 2022, 3:39 PM IST

ಕಿಯೋಂಜಾರ್ (ಒಡಿಶಾ):ನವಜಾತ ಶಿಶುವೊಂದು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಪೋಷಕರು ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎಂಬುವಷ್ಟರಲ್ಲಿ ಆ ಮಗುವಿಗೆ ಜೀವ ಬಂದ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಕಿಯೋಂಜರ್​ ಜಿಲ್ಲೆಯಲ್ಲಿ ಜನವರಿ 19ರಂದು ಈ ಘಟನೆ ನಡೆದಿದೆ. ಕಿಯೋಂಜರ್​ ಜಿಲ್ಲೆಯ ಕರಾಂಜಿಯಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಮಗು ಅಳದೇ ಸುಮ್ಮನಿತ್ತು. ಇದರಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಬಳಿಕ ಪೋಷಕರು ದುಃಖದಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎಂಬುವಷ್ಟರಲ್ಲಿ ಮಗು ಅಳಲು ಶುರು ಮಾಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ತಕ್ಷಣವೇ ಮರಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.

ವೈದ್ಯರು ಮಗುವನ್ನು ಸರಿಯಾಗಿ ತಪಾಸಣೆ ಮಾಡದೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ ಎಂದು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ:Video: ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹ ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ!

ABOUT THE AUTHOR

...view details