ಧೆಂಕನಲ್ (ಒಡಿಶಾ): ಕೋವಿಡ್ ಲಸಿಕೆ ಪಡೆಯುವವರಲ್ಲಿ ಜ್ವರ, ತಲೆನೋವು ಹಾಗೂ ಸಣ್ಣಪುಟ್ಟ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಒಡಿಶಾದ ಧೆಂಕನಲ್ ನಿವಾಸಿಗಳಿಗೆ ವಿಭಿನ್ನವಾದ ಬದಲಾವಣೆಯೊಂದು ಕಾಣಿಸಿಕೊಂಡಿದೆ. ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಉತ್ಪತ್ತಿಯಾಗುತ್ತಿದೆಯಂತೆ.
ಈ ಬಗ್ಗೆ ಮಾತನಾಡಿರುವ ದಕ್ಷಿಣಕಲಿ ಪ್ರದೇಶದ ರಮೇಶ್ ಚಂದ್ರ ಸಾಹು, ನಾನು ಮೇ 18 ರಂದು ಮೊದಲ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡೆ. ನನ್ನ ಪತ್ನಿ ಗೀತಾಂಜಲಿ ಮೇ 27 ರಂದು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಈಗ ನಮ್ಮ ದೇಹವು, ಕಂಚು, ಉಕ್ಕಿನ ವಸ್ತುಗಳನ್ನು ಆಕರ್ಷಿಸುತ್ತಿದೆ. ನಮ್ಮ ದೇಹದಲ್ಲಿ ಅಯಸ್ಕಾಂತ ಉತ್ಪತ್ತಿಯಾಗುತ್ತಿರಬಹುದು ಎಂದಿದ್ದಾರೆ.