ಭುವನೇಶ್ವರ:14 ದಿನಗಳ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ನಗರ ಪಾಕೆಟ್‌ಗಳಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಮಂಜೂರು ಮಾಡಿದ್ದಾರೆ.
ಸಾಂಕ್ರಾಮಿಕ ಕೊರೊನಾ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಆದ್ದರಿಂದ ನಾಯಿಗಳು ಮತ್ತು ದನಕರುಗಳು ಆಹಾರದಿಂದ ವಂಚಿತವಾಗುತ್ತಿವೆ. ಪ್ರಾಣಿಗಳ ಆಹಾರಕ್ಕಾಗಿ ಸಿಎಂ ಪರಿಹಾರ ನಿಧಿಯಿಂದ 60 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಐದು ನಗರಸಭೆ, 48 ಪುರಸಭೆಗಳು ಮತ್ತು 61 ಅಧಿಸೂಚಿತ ಪ್ರದೇಶ ಮಂಡಳಿಗಳಲ್ಲಿ (ಎನ್‌ಎಸಿ) ಈ ಹಣ ಲಭ್ಯವಾಗಲಿದೆ ಎಂದು ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪ್ರಾಣಿಗಳಿಗೆ ಆಹಾರವನ್ನು ಒದಗಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.