ಭುವನೇಶ್ವರ(ಒಡಿಶಾ):ಮೃಗಾಯಲದಲ್ಲಿದ್ದ ಆಟಿಕೆಯ ರೈಲು(Toy train) ಬೆಂಕಿಗೆ ತುತ್ತಾಗಿ ಸುಮಾರು 45 ಪ್ರಯಾಣಿಕರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ನಂದನಕಾನನ್ ಮೃಗಾಲಯದಲ್ಲಿ ನಡೆದಿದೆ.
ತಾಂತ್ರಿಕ ಅಡಚಣೆಯಿಂದಾಗಿ ಆಟಿಕೆ ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಂದನ್ಕಾನನ್ ಮೃಗಾಲಯದ ಉಪ ನಿರ್ದೇಶಕ ಸಂಜೀತ್ ಕುಮಾರ್ ತಿಳಿಸಿದ್ದು, ಆಟಿಕೆ ರೈಲನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.