ಮಲ್ಕಾನ್ಗಿರಿ:ಒಡಿಶಾದ ಮಲ್ಕಾನ್ಗಿರಿ ಜಿಲ್ಲೆಯಲ್ಲಿ ಗಾಂಜಾ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಓರ್ವ ಎಎಸ್ಐ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಎಎಸ್ಐ ಅವರನ್ನು ಜಯದಾಶ್ ಖಾರಾ ಎಂದು ಗುರುತಿಸಲಾಗಿದೆ. ಅವರನ್ನು ಜಿಲ್ಲೆಯ ಕರ್ತನಪಲ್ಲಿ ಪ್ರದೇಶದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು.
ವರದಿಗಳ ಪ್ರಕಾರ, ಆರೋಪಿಗಳಿಂದ 420 ಕೆಜಿ ತೂಕದ ಗಾಂಜಾ, 10,000 ರೂಪಾಯಿ ನಗದು, ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಇವ್ನು ಕೊಡುವ ಸೂಪ್ ಸೇವಿಸಿದ್ರೆ ಕಥೆ ಅಷ್ಟೇನೆ.. ಬೆಚ್ಚಿಬೀಳಿಸುತ್ತೆ ಈತನ ಕೃತ್ಯ!
ಎಎಸ್ಐ ಖಾರಾ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಲ್ಕಾನ್ಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದರು. ಮಲ್ಕಾನ್ಗಿರಿಯಿಂದ ಇತರ ರಾಜ್ಯಗಳಿಗೆ ಗಾಂಜಾ ಸಾಗಿಸಲು ಎಎಸ್ಐ ಖಾರಾ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.