ಭುವನೇಶ್ವರ(ಒಡಿಶಾ):ಒಡಿಯಾ ಚಿತ್ರರಂಗದ ನಟ ಬಾಬುಶಾನ್ ಮೊಹಾಂತಿ, ಪತ್ನಿ ತೃಪ್ತಿ ಸತಪತಿ ಮತ್ತು ನಟಿ ಪ್ರಕೃತಿ ನಡುವೆ ಇಂದು ಬೆಳಗ್ಗೆ ಜಗಳವಾಗಿದೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದು ಬೆಳಗ್ಗೆ ಭುವನೇಶ್ವರದ ಲಕ್ಷ್ಮೀಸಾಗರ್ ಪ್ರದೇಶದಲ್ಲಿ ಈ ಸೆಲೆಬ್ರಿಟಿಗಳು ಮತ್ತು ನಟನ ಪತ್ನಿ ಕಾರಿನಲ್ಲಿ ಜಗಳವಾಡಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಕಾರಿನಲ್ಲಿದ್ದವರು ಒಬ್ಬರಿಗೊಬ್ಬರು ಕೈ ಮಾಡಿಕೊಂಡಿದ್ದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.