ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ದೀಪಕ್ ಚಹರ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಬಿಸಿಸಿಐನ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಚಹರ್ ಬದಲಿಗೆ ಸುಂದರ್ ಹೆಸರನ್ನು ಶನಿವಾರ ಪ್ರಕಟಿಸಿದೆ. ಇಂದೋರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ T20I ನಂತರ ಚಹರ್ ಬೆನ್ನು ನೋವು ಹೊಂದಿದ್ದರು. ಅಲ್ಲದೇ ಲಖನೌದಲ್ಲಿ ನಡೆದ ಮೊದಲ ODI ನಲ್ಲಿ ಭಾರತದ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಂಡಿರಲಿಲ್ಲ.
30 ವರ್ಷ ವಯಸ್ಸಿನ ಚಹರ್ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹಿಂತಿರುಗಲಿದ್ದು, ಅಲ್ಲಿನ ವೈದ್ಯಕೀಯ ತಂಡ ಅವರ ಮೇಲ್ವಿಚಾರಣೆ ಮಾಡಲಿದೆ. ಚಹರ್ 9 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಪಂದ್ಯಗಳಲ್ಲಿ, ಅವರು 3/27 ರ ಅತ್ಯುತ್ತಮ ಬೌಲಿಂಗ್ ಅಂಕಿ - ಅಂಶಗಳೊಂದಿಗೆ 15 ವಿಕೆಟ್ಗಳನ್ನು ಪಡೆದಿದ್ದಾರೆ.
ಕೆಳ ಕ್ರಮಾಂಕದಲ್ಲಿ ಆಡುವ ಅತ್ಯಂತ ಸಮರ್ಥ ಬ್ಯಾಟ್ಸಮನ್ ಚಹರ್ ಆರು ಇನ್ನಿಂಗ್ಸ್‌ಗಳಲ್ಲಿ 60.00 ಸರಾಸರಿಯಲ್ಲಿ 180 ರನ್ ಗಳಿಸಿದ್ದಾರೆ. ಎರಡು ಅರ್ಧ ಶತಕ ಗಳಿಸಿರುವ ಅವರ ಅತ್ಯುತ್ತಮ ಸ್ಕೋರ್ 69*.