ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸ ಸಭೆಯಲ್ಲಿ ನಮೋ ಕಡಲ ತೀರದ ಸಮಸ್ಯೆ ಹಾಗೂ ಸಮುದ್ರ ಸುರಕ್ಷತೆ ಹೆಚ್ಚಿಸುವ ವಿಷಯದ ಮೇಲೆ ಮಾತನಾಡಿದರು. ವಿಶೇಷವೆಂದರೆ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿರುವ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನಮೋ ಪಾತ್ರರಾಗಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಡಲ್ಗಳ್ಳತನ ಹಾಗೂ ಭಯೋತ್ಪಾದನೆಗೆ ಸಮುದ್ರ ಮಾರ್ಗ ಹೆಚ್ಚು ದುರ್ಬಳಿಕೆಯಾಗುತ್ತಿದೆ ಎಂದು ತಿಳಿಸಿದರು. ಕಡಲ ಭದ್ರತೆ ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಸಹಕಾರ ಅಗತ್ಯವಾಗಿರಬೇಕು ಎಂದರು.
ಸಮುದ್ರ ಮಾರ್ಗ ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿ, ಈ ಸಾಗರ ನಮ್ಮ ಭವಿಷ್ಯದ ದೃಷ್ಟಿಯಿಂದ ಅತಿಮುಖ್ಯವಾಗಿದ್ದು, ಹೊಸ ಸವಾಲುಗಳೊಂದಿಗೆ ವ್ಯಾಪಾರ ಮಾರ್ಗ ಭದ್ರಪಡಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಸಮುದ್ರದ ಭದ್ರತೆ ಹೆಚ್ಚಿಸಬೇಕಾಗಿರುವ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಅನೇಕ ರೀತಿಯ ಸವಾಲು ಎದುರಿಸುವಂತಾಗಿದೆ ಎಂದರು. ನಾನಾ ಭಯೋತ್ಪಾದಕ ಸಂಘಟನೆಗಳು ಸಮುದ್ರವನ್ನ ಕಳ್ಳಸಾಗಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಕಡಲ್ಗಳ್ಳತನ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.
- ಕಡಲ ಭದ್ರತೆ ಸುರಕ್ಷತೆಗೆ ಐದು ಅಂಶ ಮಂಡಿಸಿದ ನಮೋ
1) ಸಮುದ್ರದ ಮೂಲಕ ಕಾನೂನು ಬದ್ಧ ವ್ಯಾಪಾರ ನಡೆಸಲು ನಿರ್ಬಂಧ ತೆಗೆದುಹಾಕುವುದು