ಹೈದರಾಬಾದ್:ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ದಾರ್ಶಿ ಕ್ಷೇತ್ರದ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ ಅವರ ಜನ್ಮದಿನ ಆಚರಣೆಯ ಸಮಾರಂಭದಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸಲಾಗಿದ್ದು, ಈಗ ವಿವಾದ ಸೃಷ್ಟಿಸಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕರ ಬರ್ತ್ಡೇ ಕಾರ್ಯಕ್ರಮದಲ್ಲಿ ಯುವತಿಯರ ಅಶ್ಲೀಲ ನೃತ್ಯ
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಬರ್ತ್ಡೇ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಆಯೋಜಿಸಲಾಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯದ ಶಾಸಕರ ವಿರುದ್ಧ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಕ್ಲಾಕ್ ಟವರ್ ಜಂಕ್ಷನ್ನಲ್ಲಿ ರಸ್ತೆ ಮಧ್ಯದಲ್ಲಿ ಕಾರ್ಯಕ್ರಮಕ್ಕಾಗಿ ಪೆಂಡಾಲ್ ಹಾಕಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಇದೇ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಕೆಲ ಯುವ ವೈಎಸ್ಆರ್ಸಿಪಿ ಕಾರ್ಯಕರ್ತರು ಯುವತಿಯರೊಂದಿಗೆ ಅಶ್ಲೀಲ ನೃತ್ಯ ಮಾಡಿದ್ದಾರೆ. ಮಧ್ಯರಾತ್ರಿ ಶಾಸಕರು ಕೇಕ್ ಕಟ್ ಮಾಡಿದ ನಂತರವೂ ಈ ಡಾನ್ಸ್ ಮುಂದುವರಿದಿದ್ದವು. ಆದರೆ, ಸ್ಥಳದಲ್ಲೇ ಇದ್ದ ಶಾಸಕರು ಇದಾವುದನ್ನೂ ತಡೆಯದೇ ಸುಮ್ಮನೆ ಇರುವುದು ಸಂಶಯ ಮೂಡಿಸಿತು.
ಇಷ್ಟು ಮಾತ್ರವಲ್ಲದೇ ಈ ಅಶ್ಲೀಲ ನೃತ್ಯ ನಡೆಯುತ್ತಿದ್ದ ಸ್ಥಳ ಪೊಲೀಸ್ ಠಾಣೆಗೆ ತುಂಬಾ ಹತ್ತಿರದಲ್ಲೇ ಇತ್ತು. ಅಷ್ಟಾದರೂ ಪೊಲೀಸರು ಕೂಡ ಮೂಕ ಪ್ರೇಕ್ಷಕರಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.