ಕಾನ್ಪುರ(ಉತ್ತರಪ್ರದೇಶ) :ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಗ್ಗೆ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿರುವ ಹರಿಬಿಟ್ಟಿರುವ ಆರೋಪ ಉತ್ತರಪ್ರದೇಶದ ಕಾನ್ಪರದಲ್ಲಿ ಕೇಳಿ ಬಂದಿದೆ. ಹಿಂದೂ ದೇವ-ದೇವತೆಗಳು ಜತೆಗೂಡಿ ಮೋದಿ ಮತ್ತು ಭಾಗವತ್ ಅವರನ್ನು ಅವಹೇಳನಕಾರಿ ಚಿತ್ರಿಸಲಾಗಿದೆ ಎಂದು ವಕೀಲ ಅನಿರುದ್ಧ್ ಜೈಸ್ವಾಲ್ ಆರೋಪಿಸಿದ್ದಾರೆ.
ವಿಯೇಂದ್ರ ಕುಮಾರ್ ಯಾದವ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಚಿತ್ರಗಳನ್ನು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಿತ್ರಗಳನ್ನು ಹರಿಬಿಟ್ಟ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ಅನಿರುದ್ಧ್ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ-ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್ ದೂರು ಪಡೆಯಲು ಹಿಂದೇಟು: ಹಿಂದೂ ದೇವ-ದೇವತೆಗಳು ಮತ್ತು ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಕುರಿತಾಗಿ ಅವಹೇಳನಕಾರಿ ಚಿತ್ರಿಸಿರುವ ಫೋಟೋಗಳ ಬಗ್ಗೆ ದೂರು ನೀಡಲು ಜೂಹಿ ಪೊಲೀಸ್ ಠಾಣೆಗೆ ಹೋದರೆ ದೂರು ಪಡೆದಿಲ್ಲ ಎಂದು ವಕೀಲ ಆರೋಪಿಸಿದ್ದಾರೆ. ಈ ಬಗ್ಗೆ ಇನ್ಸ್ಪೆಕ್ಟರ್ ಜೊತೆ ಮಾತನಾಡಿದರೆ ಒಂದು ಗಂಟೆ ಕಾಯಿಸಿದರು. ಅಲ್ಲದೇ, ಕಾನ್ಪರ ಆಯುಕ್ತರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರ ಈ ವರ್ತನೆ ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ: ಎನ್ಕೌಂಟರ್ನಲ್ಲಿ ಇಬ್ಬರು ಉಗ್ರ ಹತ