ಮಹಿಳೆಯರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಲು ಇಲ್ಲಿ ಕಾರಣವಿದೆ. ಸ್ಥೂಲಕಾಯತೆ (ಬೊಜ್ಜು)ಯು ಹೆಚ್ಚಿನ ಮುಟ್ಟಿನ ರಕ್ತದ ನಷ್ಟಕ್ಕೆ ಕಾರಣವಾಗಬಹುದು. ಇದು ಗರ್ಭಾಶಯದ ಒಳಪದರದಲ್ಲಿ ಹೆಚ್ಚಿದ ಉರಿಯೂತದಿಂದಾಗಿ, ಋತುಚಕ್ರವಾಗುವುದು ವಿಳಂಬವಾಗಬಹುದು ಎಂದು ಮಹಿಳೆಯರು ಮತ್ತು ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ತಿಳಿಸಲಾಗಿದೆ.
ಯುಕೆ ಸ್ಕಾಟ್ಲೆಂಡ್ನ ಈಡನ್ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನವು "ಹೆಚ್ಚುತ್ತಿರುವ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮತ್ತು ಮಹಿಳೆಯರಲ್ಲಿ ಅತಿಯಾದ ಋತುಚಕ್ರದ ನಡುವೆ ದುರ್ಬಲ ಸಂಬಂಧ ಹೊಂದಿದೆಯಾದರೂ, ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ ಸಂಬಂಧವನ್ನು ಹೊಂದಿದೆ ಎಂದು ಕಂಡುಹಿಡಿದಿದೆ.
ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, ಸಾಮಾನ್ಯ ಆಹಾರ ಸೇವಿಸಿದ ಇಲಿಗಳಿಗೆ ಹೋಲಿಸಿದರೆ ಹೆಚ್ಚಿನ ಕೊಬ್ಬಿನ ಆಹಾರ ಸೇವಿಸಿರುವ ಇಲಿಗಳು ಗರ್ಭಾಶಯದ ಒಳಪದರವನ್ನು ಚೆಲ್ಲಿದ ನಂತರ ಒಳಪದರವನ್ನು ಸರಿಪಡಿಸಲು ವಿಳಂಬವನ್ನು ತೋರಿಸಿದೆ ಎಂದು ಕಂಡುಬಂದಿದೆ.
ಇಲಿಗಳಿಂದ ಗರ್ಭ ಅಂಗಾಂಶವನ್ನು ಮತ್ತಷ್ಟು ಪರೀಕ್ಷಿಸಿದಾಗ ದೇಹದ ತೂಕ ಹೆಚ್ಚಿರುವ ಇಲಿಗಳಲ್ಲಿ ಉರಿಯೂತದ ಅಂಶಗಳು ಹೆಚ್ಚಿವೆ ಎಂದು ಸೂಚಿಸುತ್ತದೆ. ಸಂಶೋಧನೆಗಳನ್ನು ಜರ್ನಲ್ ಆಫ್ ಎಂಡೋಕ್ರೈನಾಲಜಿಯಲ್ಲಿ ವಿವರಿಸಲಾಗಿದೆ.