ನಿದ್ರೆಯ ವೇಳೆ ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡುವುದು ಅಸ್ವಸ್ಥತೆಯ ಸಂಕೇತ. ಇದು ವ್ಯಕ್ತಿ ವಿಪರೀತ ಊದಿಕೊಂಡಾಗ ಅಂದರೆ ಬೊಜ್ಜಿನ ಸಮಸ್ಯೆ ಉಂಟಾದಾಗ ಎದುರಿಸುವ ಕಿರಿಕಿರಿಯಾಗಿದೆ. ಇದರಿಂದ ಕೆಲವೊಮ್ಮೆ ಗೊರಕೆ ಬರುವುದು, ಏದುಸಿರು ಬಿಟ್ಟಾಗ ಸದ್ದು ಬರುವ ಸಾಧ್ಯತೆ ಇರುತ್ತದೆ. ಹೀಗೆ ನಿದ್ರಾವಸ್ಥೆಯ ವೇಳೆ ಮೂಗು ಕಟ್ಟಿಕೊಂಡು ಏದುಸಿರು ಬಿಡುವುದನ್ನು ತಡೆಯಬೇಕಾದರೆ, ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡಲೇಬೇಕು ಎಂಬುದು ವೈದ್ಯರ ಸಲಹೆಯಾಗಿದೆ.
ಈ ಬಗ್ಗೆ ಹೈದರಾಬಾದ್ನ ವಿಐಎನ್ಎನ್ ಆಸ್ಪತ್ರೆಯ ವೈದ್ಯರಾದ ಡಾ. ರಾಜೇಶ್ ವುಕ್ಕಲಾ ಅವರು ಹೇಳುವಂತೆ, ನಾವು ಉಸಿರಾಡುವಾಗ ಆಮ್ಲಜನಕ ಮತ್ತು ಉಸಿರು ಬಿಟ್ಟಾಗ ಕಾರ್ಬನ್ ಡೈ ಆಕ್ಸೈಡ್ ಮಟ್ಟ ಹೊಂದಿಕೆಯಾಗಬೇಕು. ಸೈನಸ್, ಮೂಗು, ಕುತ್ತಿಗೆ ರಚನೆಯಲ್ಲಿ ದೋಷವಿದ್ದಾಗ ಈ ಸ್ಲೀಪ್ ಅಮ್ನಿಯಾ (ಉಸಿರುಗಟ್ಟುವಿಕೆ) ಸಮಸ್ಯೆ ತಲೆದೋರಲಿದೆ ಎನ್ನುತ್ತಾರೆ.
ಸ್ಲೀಪ್ ಅಪ್ನಿಯಾ ಸಮಸ್ಯೆಯ ಕುರುಹುಗಳಿವು
- ಜೋರಾಗಿ ಗೊರಕೆ ಹೊಡೆಯುವುದು
- ದೇಹ ದಣಿದ ಸ್ಥಿತಿಯಲ್ಲೇ ಎಚ್ಚರಗೊಳ್ಳುವುದು
- ಲಘು ತಲೆನೋವು
- ಏಕಾಗ್ರತೆಯ ಕೊರತೆ
- ದೀರ್ಘಕಾಲದ ಆಯಾಸ
- ದೈನಂದಿನ ಚಟುವಟಿಕೆಗಳಲ್ಲಿ ಉದಾಸೀನ
- ಉಸಿರುಗಟ್ಟಿದಂತಾಗಿ ಹಠಾತ್ ಎಚ್ಚರವಾಗುವುದು
- ಉಸಿರಾಡಲು ಏದುಸಿರು ಬಿಡುವುದು
- ಒತ್ತಡ
ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಹೈಪೋಥೈರಾಯ್ಡಿಸಮ್, ಚಯಾಪಚಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಈ ಸ್ಲೀಪ್ ಅಪ್ನಿಯಾ ತೊಂದರೆ ಎದುರಿಸುತ್ತಾರೆ. ಉಚ್ವಾಸ, ನಿಶ್ವಾಸದ ವ್ಯತ್ಯಯದಿಂದ ಮೆದುಳು, ಹೃದಯ, ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ವೈದ್ಯರ ಎಚ್ಚರಿಕೆಯಾಗಿದೆ.
ಸ್ಲೀಪ್ ಅಪ್ನಿಯಾದಿಂದಾಗುವ ಸಮಸ್ಯೆಯೇನು?
- ಬೊಜ್ಜು
- ದೊಡ್ಡ ಕುತ್ತಿಗೆ (17 ಇಂಚುಗಳಿಗಿಂತ ಹೆಚ್ಚು)
- ಡಿವೈಟೆಡ್ ನಾಸಲ್ ಸೆಪ್ಟಮ್(DNS)
- ಅಲರ್ಜಿ
- ಸೈನುಟಿಸ್
- ಉಬ್ಬಸ