ಕರ್ನಾಟಕ

karnataka

ETV Bharat / bharat

ಗರ್ಲ್​ಫ್ರೆಂಡ್​ ಕದ್ದ 'ರೆಮ್ಡೆಸಿವಿರ್' ಕಾಳ ಸಂತೆಯಲ್ಲಿ ಮಾರಾಟ.. ನರ್ಸಿಂಗ್​ ಸಿಬ್ಬಂದಿ ಅರೆಸ್ಟ್​!

ಕೊರೊನಾ ವೈರಸ್​ಗೆ ರಾಮಬಾಣವಾಗಿರುವ ರೆಮ್ಡೆಸಿವಿರ್​​ ಔಷಧ ಕದ್ದು, ಕಾಳ ಸಂತೆಯಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯೋರ್ವನ ಇದೀಗ ಬಂಧನ ಮಾಡಲಾಗಿದೆ.

Nursing staff arrested for selling Remdesivir
Nursing staff arrested for selling Remdesivir

By

Published : Apr 24, 2021, 4:56 PM IST

ಭೋಪಾಲ್​(ಮಧ್ಯಪ್ರದೇಶ):ಗೆಳತಿ ಕಳವು ಮಾಡಿದ ರಮ್ಡೆಸಿವಿರ್ ಲಸಿಕೆ​​ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ನರ್ಸಿಂಗ್​​ ಸಿಬ್ಬಂದಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಈ ಘಟನೆ ನಡೆದಿದೆ.

ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಬಳಕೆ ಮಾಡುವ ರೆಮ್ಡೆಸಿವರ್​​​ ಚುಚ್ಚುಮದ್ದನ್ನ ಕದ್ದಿರುವ ಆರೋಪದ ಮೇಲೆ ಇದೀಗ ಖಾಸಗಿ ಆಸ್ಪತ್ರೆ ನರ್ಸ್​ ಸಿಬ್ಬಂದಿ ಬಂಧನವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗೆಳತಿ ಶಾಲಿನಿ ವರ್ಮಾ ತನ್ನ ಲವರ್​ ಜಾಲ್ಕನ್ ಸಿಂಗ್​ ಮೀನಾಗೆ​ ನೀಡುತ್ತಿದ್ದರು. ಜತೆಗೆ ಕೋವಿಡ್​ ಲಸಿಕೆ ಬಾಕ್ಸ್​ಗಳಲ್ಲಿ ಬೇರೆ ಔಷಧ ತುಂಬಿಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೋವಿಡ್​ ಸೋಂಕಿಗೊಳಗಾಗುವ ಭಯ: ಆತ್ಮಹತ್ಯೆಗೆ ಶರಣಾದ ಯುವಕ!

ಆರಂಭದಲ್ಲಿ 30,000ರೂಗೆ ಇವುಗಳನ್ನ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಖಾಸಗಿ ಆಸ್ಪತ್ರೆ ವೈದ್ಯರಿಗೆ 13,000ರೂಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಈಗಾಗಲೇ ಜಾಲ್ಕನ್​ ಸಿಂಗ್ ಮೀನಾ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನರ್ಸ್ ಶಾಲಿನಿ ವರ್ಮಾ ಪರಾರಿಯಾಗಿದ್ದಾರೆ.

ABOUT THE AUTHOR

...view details