ಕರ್ನಾಟಕ

karnataka

By

Published : Apr 24, 2021, 2:37 PM IST

ETV Bharat / bharat

ಕಾಳ ಸಂತೆಯಲ್ಲಿ ರೆಮ್ಡೆಸಿವಿರ್ ಲಸಿಕೆ ಮಾರಾಟ: ನರ್ಸ್, ಆಕೆಯ ಪ್ರಿಯತಮನ ಬಂಧನ

ಕೋವಿಡ್ -19 ವಾರ್ಡ್‌ಗಳಲ್ಲಿ ಕುಟುಂಬ ಸದಸ್ಯರು ಮತ್ತು ರೋಗಿಗಳ ಸಂಬಂಧಿಕರಿಗೆ ಅವಕಾಶವಿಲ್ಲದ ಕಾರಣ ಪರಿಸ್ಥಿತಿಯ ಲಾಭ ಪಡೆದುಕೊಂಡ ಇವರು ರೆಮ್ಡೆಸಿವಿರ್ ಲಸಿಕೆಗಳನ್ನು ಕದಿಯುತ್ತಿದ್ದರು ಎನ್ನಲಾಗಿದೆ.

black marketing Remdesivir
ಕಾಳ ಸಂತೆಯಲ್ಲಿ ರೆಮ್ಡೆಸಿವಿರ್ ಲಸಿಕೆ ಮಾರಾಟ

ಭೋಪಾಲ್/ಮಧ್ಯಪ್ರದೇಶ:ರಾಜ್ಯ ರಾಜಧಾನಿಯ ಕೋವಿಡ್ ಕೇರ್​ ಸೆಂಟರ್​ನಲ್ಲಿ ರೆಮ್ಡೆಸಿವಿರ್ ಲಸಿಕೆ ಕಾಳ ಸಂತೆ ಮಾರಾಟವಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಜಾಲ್ಖಾನ್ ಹಾಗೂ ಆತನ ಗೆಳತಿ ಶಾಲಿನಿ ವರ್ಮಾ ಎಂಬ ದಾದಿ ರೆಮ್ಡೆಸಿವಿರ್ ಬದಲಿಗೆ ರೋಗಿಗಳಿಗೆ ಸಾಮಾನ್ಯ ಚುಚ್ಚುಮದ್ದನ್ನು ನೀಡುತ್ತಿದ್ದರು. ಮಾರುಕಟ್ಟೆಯಲ್ಲಿನ ಬೇಡಿಕೆಯ ಆಧಾರದ ಮೇಲೆ ರೆಮ್ಡೆಸಿವಿರ್ ಲಸಿಕೆಯನ್ನು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಕೋವಿಡ್ -19 ವಾರ್ಡ್‌ಗಳಲ್ಲಿ ಕುಟುಂಬ ಸದಸ್ಯರು ಮತ್ತು ರೋಗಿಗಳ ಸಂಬಂಧಿಕರಿಗೆ ಅವಕಾಶವಿಲ್ಲದ ಕಾರಣ ಪರಿಸ್ಥಿತಿಯ ಲಾಭ ಪಡೆದುಕೊಂಡ ಇವರು ರೆಮ್ಡೆಸಿವಿರ್ ಲಸಿಕೆಗಳನ್ನು ಕದಿಯುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯು ಕಡಿಮೆ ಸಂಬಳ ಮತ್ತು ಹೆಚ್ಚು ಹಣ ಗಳಿಸುವ ದುರಾಸೆಯಿಂದಾಗಿ ಈ ದಂಪತಿಗಳು ಲಸಿಕೆ ಕದ್ದು ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details