ಡೆಹ್ರಾಡೂನ್/ಉತ್ತರಕಾಶಿ :ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಯು ಮೇ 3ರಿಂದ ಪ್ರಾರಂಭವಾಗಿದ್ದು, ದಿನದಿಂದ ದಿನಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ ಎಂಟೂವರೆ ಲಕ್ಷಕ್ಕೂ ಅಧಿಕ ಭಕ್ತರು ಚಾರ್ಧಾಮ್ಗೆ ಭೇಟಿ ನೀಡಿದ್ದು, ಯಾತ್ರೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಮೇ 22ಕ್ಕೆ 57ರಷ್ಟಿದ್ದ ಸಾವನ್ನಪ್ಪಿದ ಯಾತ್ರಿಕರ ಸಂಖ್ಯೆ ಇಂದು 60ಕ್ಕೇರಿದೆ.
ಚಾರ್‌ಧಾಮ್ ಸಾವಿನ ಸಂಖ್ಯೆ :ಚಾರ್‌ಧಾಮ್ ಯಾತ್ರೆಯಲ್ಲಿ ಇದುವರೆಗೆ 60 ಯಾತ್ರಿಕರು ಸಾವನ್ನಪ್ಪಿದ್ದಾರೆ. ಯಮುನೋತ್ರಿ ಧಾಮದಲ್ಲಿ 17 ಯಾತ್ರಿಕರು, ಗಂಗೋತ್ರಿ ಧಾಮದಲ್ಲಿ 4 ಭಕ್ತರು, ಕೇದಾರನಾಥ ಧಾಮದಲ್ಲಿ 28 ಭಕ್ತರು, ಬದರಿನಾಥ ಧಾಮದಲ್ಲಿ 11 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ನೀವು ಅಂಕಿ-ಅಂಶಗಳನ್ನು ಗಮನಿಸಿದರೆ ಕೇದಾರನಾಥ ಯಾತ್ರೆಯಲ್ಲಿ ಗರಿಷ್ಠ ಸಾವು ಸಂಭವಿಸಿವೆ. ಇಲ್ಲಿ ಈವರೆಗೆ 28 ಯಾತ್ರಿಕರು ಸಾವನ್ನಪ್ಪಿದ್ದಾರೆ.
ಯಮುನೋತ್ರಿ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಯಾಣಿಕ : ಯಮುನೋತ್ರಿ ಯಾತ್ರೆಯಲ್ಲಿದ್ದ ಮಧ್ಯಪ್ರದೇಶದ ನಿವಾಸಿಯೊಬ್ಬರು ಜಾಂಕಿ ಚಟ್ಟಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪೊಲೀಸರು ಮೃತದೇಹದ ಪಂಚನಾಮೆಯ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಭವರಲಾಲ್ ನಿವಾಸಿ ಪಾರ್ಸೋಲಿ ಅಗರ್ ಮಾರ್ಗ ತರಾನಾ ಉಜ್ಜಯಿನಿ ಮಧ್ಯಪ್ರದೇಶದ ಯಮುನೋತ್ರಿ ಧಾಮಕ್ಕೆ ಪ್ರಯಾಣ ಬೆಳೆಸುತ್ತಿದ್ದರು.