ಲಖಿಂಪುರ ಖೇರಿ (ಉತ್ತರ ಪ್ರದೇಶ): ಇಲ್ಲಿನ ದುಧ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಿಶನ್‌ಪುರ ಸೆಂಚುರಿಯಲ್ಲಿ ಹೆಣ್ಣು ಹುಲಿಯೊಂದು ತನ್ನ ಐದು ಮರಿಗಳೊಂದಿಗೆ ಸಾಗುತ್ತಿರುವುದು ಪತ್ತೆಯಾಗಿದೆ. ಇದನ್ನು ಕಂಡು ಪ್ರವಾಸಿಗರು ಪುಳಕಗೊಂಡಿದ್ದಾರೆ.
ಕಿಶನ್‌ಪುರ ಸೆಂಚುರಿಯಲ್ಲಿ ಹುಲಿ ಮತ್ತು ಮರಿಗಳು ಕಂಡುಬಂದ ಹಿನ್ನೆಲೆಯಲ್ಲಿ ದುಧ್ವಾ ಹುಲಿ ಸಂರಕ್ಷಿತಾರಣ್ಯದ ಆಡಳಿತ ಮಂಡಳಿ ಇವುಗಳ ಮೇಲೆ ಕಣ್ಗಾವಲಿರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಬಿ.ಪ್ರಭಾಕರ್, ಈ ಹುಲಿ ಮರಿಗಳ ಮೇಲೆ ಕ್ಯಾಮರಾಗಳ ಮೂಲಕ ನಿಗಾ ಇಡಲಾಗುವುದು. ತಾಯಿ ಹುಲಿಯ ಮೇಲೂ ನಿಗಾ ಇಡಲಾಗುವುದು. ಈ ಪ್ರದೇಶಕ್ಕೆ ಪ್ರವಾಸಿಗರನ್ನು ಭೇಟಿ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.
ದುಧ್ವಾ ಹುಲಿ ಸಂರಕ್ಷಿತಾರಣ್ಯವು ಅಳಿವಿನಂಚಿನಲ್ಲಿರುವ ಹುಲಿಗಳಿಗೆ ವರದಾನವಾಗಿದೆ. ಕಿಶನ್ಪುರ್ ಸಂಚುರಿಯಲ್ಲಿ ಐದು ಮರಿಗಳೊಂದಿಗೆ ಹುಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ದುಧ್ವಾದ ಉಪನಿರ್ದೇಶಕ ರಂಗರಾಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಐದು ಮರಿಗಳು ವಿವಿಧೆಡೆ ಕಾಣಿಸುತ್ತಿವೆ. ಒಂದೆಡೆ ಮೂರು, ಮತ್ತೊಂದೆಡೆ ಎರಡು ಮರಿಗಳು ಪತ್ತೆಯಾಗಿದೆ. ಕಿಶನ್ ಪುರನಲ್ಲಿ ಮರಿಗಳು ಪತ್ತೆಯಾಗಿರುವುದು ಸಂತಸದ ಸಂಗತಿ. ಇದು ನಮಗೆ ಯಾವುದೇ ಇತರ ದೊಡ್ಡ ಸುದ್ದಿಗಿಂತ ಕಡಿಮೆಯಲ್ಲ ಎಂದು ದುಧ್ವಾನ ಉಪನಿರ್ದೇಶಕ ಡಾ.ರಂಗರಾಜು ಹೇಳಿದ್ದಾರೆ.