ಕರ್ನಾಟಕ

karnataka

ETV Bharat / bharat

ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಗಳ ಸಂಖ್ಯೆಯನ್ನು 11 ರಿಂದ 6ಕ್ಕೆ ಇಳಿಸಿದ ಸರ್ಕಾರ

ಕೊರೊನಾ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತೆಲಂಗಾಣ ಸರ್ಕಾರ ಹತ್ತನೇ ತರಗತಿಯ ಪ್ರಶ್ನೆ ಪತ್ರಿಗಳ ಸಂಖ್ಯೆಯನ್ನು 11 ರಿಂದ 6ಕ್ಕೆ ಇಳಿಸಿದೆ.

ಹತ್ತನೆ ತರಗತಿ  ಪ್ರಶ್ನೆ ಪತ್ರಿಕೆಗಳ ಸಂಖ್ಯೆಯನ್ನು 11 ರಿಂದ 6 ಕ್ಕೆ ಇಳಿಸಿದ ತೆಲಂಗಾಣ ಸರ್ಕಾರ
SSC Exam Reduced From 11 To Six

By

Published : Feb 4, 2021, 12:23 PM IST

ಹೈದರಾಬಾದ್:ಕೊರೊನಾ ಹಿನ್ನೆಲೆಯಲ್ಲಿ ಹತ್ತನೇ ತರಗತಿಯ (ಎಸ್​ಎಸ್​ಸಿ ಪರೀಕ್ಷೆ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸಂಖ್ಯೆಯನ್ನು ಈ ವರ್ಷ 11 ರಿಂದ 6 ಕ್ಕೆ ಇಳಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಕೋವಿಡ್​ ಹಿನ್ನೆಲೆಯಲ್ಲಿ ಸುಮಾರು ಎಂಟರಿಂದ ಹತ್ತು ತಿಂಗಳುಗಳ ಕಾಲ ಶಾಲೆಗಳು ಬಂದ್​ ಆಗಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ತರಗತಿ ನಡೆಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಕೇವಲ ಪ್ರಸಕ್ತ ಶೈಕ್ಷಣಿಕ ವರ್ಷ 2021ಕ್ಕೆ ಮಾತ್ರ ಸೀಮಿತವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಓದಿ: ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪ

ಅಷ್ಟೇ ಅಲ್ಲದೆ ಈ ಬಾರಿ ಪರೀಕ್ಷೆಯ ಸಮಯವನ್ನು 2 ಗಂಟೆ 45 ನಿಮಿಷದಿಂದ 3 ಗಂಟೆ 15 ನಿಮಿಷಕ್ಕೆ ಹೆಚ್ಚಿಸಲಾಗಿದ್ದು, ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಚಿಂತನೆ ನಡೆಸಿದೆ. ತೆಲಂಗಾಣದಲ್ಲಿ ಎಸ್‌ಎಸ್‌ಸಿ ಪರೀಕ್ಷೆಗಳು ಮೇ ತಿಂಗಳಲ್ಲಿ ನಡೆಯಲಿವೆ.

ABOUT THE AUTHOR

...view details