ಶಿಮ್ಲಾ (ಉತ್ತರ ಪ್ರದೇಶ): ಉತ್ತರಾಖಂಡದ ಹಿಮನದಿ ದುರಂತವು ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಉತ್ತರಾಖಂಡದ ಇತಿಹಾಸದಲ್ಲಿ ಅತ್ಯಂತ ಘೋರ ದುರಂತ ಎನ್ನಲಾಗುತ್ತಿದೆ. ಇದೀಗ ಉತ್ತರಾಖಂಡ್ ರೀತಿಯಲ್ಲೇ ಹಿಮಾಚಲ ಪ್ರದೇಶದ ಹಿಮನದಿಗಳು ಸಹ ಅಪಾಯ ತಂದೊಡ್ಡುವ ಭೀತಿ ಇದ್ದು, ಪಂಜಾಬ್, ಹರಿಯಾಣದಲ್ಲೂ ಎಚ್ಚರಿಕೆಯ ಗಂಟೆಯಾಗಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿನ ಹಿಮನದಿ ಭಾಗಗಳಲ್ಲಿ ಕೃತಕ ಸರೋವರಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಅಪಾಯದ ಮುನ್ಸೂಚನೆ ಎನ್ನಲಾಗುತ್ತಿದೆ.
ಅಧ್ಯಯನದ ಪ್ರಕಾರ ಇಲ್ಲಿನ ಸಟ್ಲೆಜ್ ನದಿ ಪ್ರದೇಶದಲ್ಲಿ ಸರೋವರಗಳ ಸಂಖ್ಯೆ ಶೇ.16ರಷ್ಟು ಏರಿಕೆಯಾದರೆ, ಚೆನಾಬ್ ಪ್ರದೇಶದಲ್ಲಿ ಶೇ.15 ಮತ್ತು ರಾವಿ ನದಿ ಪ್ರದೇಶದಲ್ಲಿ ಶೇ.12ರಷ್ಟು ಸರೋವರಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಹವಾಮಾನ ಬದಲಾವಣೆ ವಿಭಾಗ ಕೇಂದ್ರವು ಒಂದು ವರ್ಷದ ಹಿಂದಿನ ತನ್ನ ಅಧ್ಯಯನದಲ್ಲಿ ಬಹಿರಂಗಪಡಿಸಿದೆ.
2005ರ ಬಳಿಕ ಟಿಬೆಟ್ಗೆ ಹೊಂದಿಕೊಂಡಿರುವ ಪಾರ್ಚು ಸರೋವರವು ಕೊಂಚ ಮಟ್ಟಿನ ಹಾನಿ ಮಾಡಿತ್ತು. ಆದರೆ, ಈಗ ಬೇಸಿಗೆ ಸಮಯದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ. ಅದರಲ್ಲೂ ವಿಶೇಷವಾಗಿ ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ ಜಾಗರೂಕತೆ ಮುಖ್ಯವಾಗಿದೆ.