ಭುವನೇಶ್ವರ, ಒಡಿಶಾ :ಯುವತಿಯೊಬ್ಬರ ಬೆತ್ತಲೆ ಕರೆಯನ್ನು ಆನಂದಿಸುತ್ತಿದ್ದ ಬಿಎಸ್‌ಎನ್‌ಎಲ್‌ನ ಉದ್ಯೋಗಿಯೊಬ್ಬರು 25 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ಕಂಡು ಬಂದಿದೆ. ಶುಕ್ರವಾರ ಇಲ್ಲಿನ ಸೈಬರ್ ಅಪರಾಧ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ದೂರುದಾರರು ಇತ್ತೀಚೆಗೆ ಆನ್‌ಲೈನ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಉಪಯೋಗಿಸುತ್ತಿದ್ದರು. ಇನ್ನು ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಕಾಲ್ ಮೂಲಕ ಯುವತಿಯೊಂದಿಗೆ ಮಾತನಾಡುತ್ತಿದ್ದರು. ನಂತರ ಇಬ್ಬರ ಮಧ್ಯೆ ಸ್ನೇಹ ಬೆಳೆದಿದೆ. ಅವರ ಸ್ನೇಹ ನಿಯಮಿತ ನಗ್ನ ವಿಡಿಯೋ ಕರೆಗಳವರೆಗೂ ಬೆಳೆದಿತ್ತು.