ಮಹಬೂಬ್‌ನಗರ (ತೆಲಂಗಾಣ):ಮಹಿಳೆಯರಿಗೆ ನಗ್ನ ಫೋಟೋಗಳನ್ನು ಕಳುಹಿಸುವಂತೆ ಹಣದ ಆಮಿಷವೊಡ್ಡಿದ್ದ ನಾಲ್ವರು ವಂಚಕರನ್ನು ಮಹಬೂಬ್‌ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಡ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದರು. ಆರೋಪಿಗಳು ಆ ನಗ್ನ ಫೋಟೋಗಳನ್ನು ಬಳಸಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಸಿಗಳನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡ ಕಿಂಗ್ ಪಿನ್:ಪ್ರಕರಣದ ಕಿಂಗ್ ಪಿನ್ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿಯನ್ನು ಬಂಧಿಸಿದರೆ ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಪೂಜಾ ವಿಧಿವಿಧಾನಗಳಿಗೆ ನಿಮ್ಮ ಫೋಟೋಗಳು ಆಯ್ಕೆಯಾದರೆ ಕೋಟಿಗಟ್ಟಲೆ ಸಂಪಾದಿಸಬಹುದು ಎಂದು ಮಹಿಳೆಯರ ಗಮನವನ್ನು ಗ್ಯಾಂಗ್ನ ಆರೋಪಿಗಳು ಸೆಳೆಯುತ್ತಿದ್ದರು. ಆದರೆ, ಆ ಪೂಜೆಗೆ ಆಯ್ಕೆಯಾಗಲು ನ್ಯೂಡ್ ಫೋಟೋಗಳು ಬೇಕು ಎಂದು ಆಮಿಷ ಒಡ್ಡುತ್ತಿದ್ದರು. 20ರಿಂದ 25 ಅಮಾಯಕ ಮಹಿಳೆಯರ ನಗ್ನ ಫೋಟೋಗಳನ್ನು ಸಂಗ್ರಹಿಸಲು ಸುಳ್ಳು ಹೇಳುತ್ತಿದ್ದ ಗ್ಯಾಂಗ್ ನಾಲ್ವರನ್ನು ಮಹಬೂಬ್‌ನಗರ ಜಿಲ್ಲೆ ಜಡಚರ್ಲಾ ಪೊಲೀಸರು ಬಂಧಿಸಿದ್ದಾರೆ.