ಕರ್ನಾಟಕ

karnataka

ETV Bharat / bharat

ನಾಗಾಲ್ಯಾಂಡ್​ ಪ್ರತ್ಯೇಕ ರಾಷ್ಟ್ರಕ್ಕೆ ಎನ್‌ಎಸ್‌ಸಿಎನ್ ಬೇಡಿಕೆ

ನಾಗಾಲ್ಯಾಂಡ್​ ಪ್ರತ್ಯೇಕ ರಾಷ್ಟ್ರದ ಬೇಡಿಕೆಯು ಅಚಲವಾಗಿದೆ ಎಂದು ಎನ್‌ಎಸ್‌ಸಿಎನ್ (ಐಎಂ) ಸಂಘಟನೆ ಹೇಳಿದೆ.

nscn-an-organization-demanding-nagaland-as-a-separate-country
ನಾಗಾಲ್ಯಾಂಡ್​ ಪ್ರತ್ಯೇಕ ರಾಷ್ಟ್ರಕ್ಕೆ ಎನ್‌ಎಸ್‌ಸಿಎನ್ ಬೇಡಿಕೆ

By

Published : Nov 24, 2022, 11:08 PM IST

ಕೊಹಿಮಾ (ನಾಗಾಲ್ಯಾಂಡ್): ನಾಗಾಲ್ಯಾಂಡ್​ ಪ್ರತ್ಯೇಕ ರಾಷ್ಟ್ರಕ್ಕಾಗಿ ಎನ್‌ಎಸ್‌ಸಿಎನ್ (ಐಎಂ) ಸಂಘಟನೆಯ ಬೇಡಿಕೆ ಮುಂದುವರೆದಿದೆ. ಕಳೆದ 25 ವರ್ಷಗಳಿಂದ ಭಾರತ ಸರ್ಕಾರದೊಂದಿಗೆ 80 ಸುತ್ತಿನ ಮಾತುಕತೆಗಳ ನಂತರವೂ ಪ್ರತ್ಯೇಕ ಧ್ವಜ ಮತ್ತು ಸಂವಿಧಾನದ ಬೇಡಿಕೆಯು ಅಚಲವಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.

ನಾಗಾಲಿಮ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿ (ಎನ್‌ಎಸ್‌ಸಿಎನ್​)ಯು ನಾಗಾ ರಾಷ್ಟ್ರೀಯ ಧ್ವಜದ ಕುರಿತು ಯಾವುದೇ ಮಾತುಕತೆಯನ್ನು ತಳ್ಳಿ ಹಾಕಿದೆ. ಇಂಡೋ-ನಾಗಾ ಶಾಂತಿ ಪ್ರಕ್ರಿಯೆಗೆ ನಾಗಾ ಧ್ವಜ ಮತ್ತು ಯೆಹಜಾಬೋ (ನಾಗ ಸಂವಿಧಾನ) ಹೊರತಾಗಿ ಯಾವುದೇ ಪರಿಹಾರವಿಲ್ಲ ಎಂದು ಉಗ್ರಗಾಮಿ ಗುಂಪು ಮತ್ತೆ ಪ್ರತಿಪಾದಿಸಿದೆ.

ನಾಗಾ ರಾಷ್ಟ್ರೀಯ ಧ್ವಜವು 'ದೇವರು ನೀಡಿದ ಇತಿಹಾಸ' ಮತ್ತು ನಾಗಾ ಜನರ ಗುರುತಾಗಿದೆ ಎಂದು ಎನ್‌ಎಸ್‌ಸಿಎನ್ ತನ್ನ ಮಾಸಿಕ ಮುಖವಾಣಿ ನಾಗಲಿಮ್ ವಾಯ್ಸ್‌ನ ನವೆಂಬರ್ ಸಂಚಿಕೆಯಲ್ಲಿ ಹೇಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಆನ್​ಲೈನ್​ನಲ್ಲಿ ಪತ್ರಕರ್ತರಿಗೆ ಬೆದರಿಕೆ: ಕಾಶ್ಮೀರ ಪೊಲೀಸರಿಂದ ಶೋಧ ಕಾರ್ಯಾಚರಣೆ

ABOUT THE AUTHOR

...view details